Site icon PowerTV

‘ಅವತಾರ್- 2’ಗೂ ಮುನ್ನ ಅವತಾರ್ ರೀ ರಿಲೀಸ್​ಗೆ ಸಜ್ಜು

ಇಡೀ ವಿಶ್ವವೇ ಅವತಾರ್- 2ಗಾಗಿ ಎದುರು ನೋಡ್ತಿದ್ರೆ, ಅವತಾರ್​ನ ರೀ ರಿಲೀಸ್ ಮಾಡೋ ಧಮಾಕೇದಾರ್ ಸುದ್ದಿಯೊಂದಿಗೆ ಬಿಗ್ ಸರ್​ಪ್ರೈಸ್ ಕೊಟ್ಟಿದ್ದಾರೆ ಕ್ಯಾಪ್ಟನ್ ಜೇಮ್ಸ್ ಕ್ಯಾಮೆರಾನ್. ಅದ್ರ ಹಿಂದಿನ ಅಸಲಿ ಉದ್ದೇಶವೇನು ಅನ್ನೋದ್ರ ಜೊತೆಗೆ ಅವತಾರ್ ನ್ಯೂ ವರ್ಷನ್ ಹೇಗಿರಲಿದೆ ಅನ್ನೋದ್ರ ಎಕ್ಸ್​ಕ್ಲೂಸಿವ್ ಪ್ಯಾಕೇಜ್ ಇಲ್ಲಿದೆ. ನೀವೇ ಓದಿ.

ಹಾಲಿವುಡ್ ಇಂಡಸ್ಟ್ರಿಯ ಮಾಸ್ಟರ್​ಪೀಸ್ ಸಿನಿಮಾಗಳಲ್ಲಿ ಅವತಾರ್ ಕೂಡ ಒಂದು. 2009ರಲ್ಲಿ ತೆರೆಕಂಡ ಎಪಿಕ್ ಅಡ್ವೆಂಚರ್ ಮೂವಿ ಅವತಾರ್, ವಿಶ್ವದಾದ್ಯಂತ ಮಾಡಿದ ಹಂಗಾಮ ಅಷ್ಟಿಷ್ಟಲ್ಲ. ಜೇಮ್ಸ್ ಕ್ಯಾಮೆರಾನ್ ಅಷ್ಟು ಅದ್ಭುತವಾಗಿ ಆ ಸೈನ್ಸ್ ಫಿಕ್ಷನ್ ಮೂವಿಯನ್ನ ಕಟ್ಟಿಕೊಟ್ಟಿದ್ರು. ನೋಡುಗರನ್ನ ಹೊಸ ಪ್ರಪಂಚದೊಳಕ್ಕೆ ಕರೆದೊಯ್ಯುವಂತಿದ್ದ ಆ ಚಿತ್ರ ಇಂಡಿಯಾದಲ್ಲೂ ಕೋಟ್ಯಂತರ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು.

ಅದಾದ ಬಳಿಕ ಅದ್ರ ಸೃಷ್ಠಿಕರ್ತ ಪ್ರೇಕ್ಷಕರ ಒತ್ತಾಯದ ಮೇರೆಗೆ ಅವತಾರ್-2 ಮಾಡಲು ಮುಂದಾದ್ರು. ಅದಕ್ಕಾಗಿ ಇಡೀ ವಿಶ್ವವೇ ಎದುರು ನೋಡ್ತಿದೆ. ರೀಸೆಂಟ್ ಆಗಿ ಅವತಾರ್-2 ಟೀಸರ್ ಕೂಡ ಲಾಂಚ್ ಆಯ್ತು. ಇದೇ ಡಿಸೆಂಬರ್ 16ಕ್ಕೆ ಅವತಾರ್ ಫ್ರಾಂಚೈಸ್ ಸಿನಿಮಾ ತೆರೆಗೆ ಬರಲಿದ್ದು, ಅದಕ್ಕೂ ಮುನ್ನ ಸೆಪ್ಟೆಂಬರ್ 23ಕ್ಕೆ ಅವತಾರ್ ಚಿತ್ರವನ್ನು ರೀ ರಿಲೀಸ್ ಮಾಡೋಕೆ ಮುಂದಾಗಿದ್ದಾರೆ ನಿರ್ದೇಶಕ ಕಮ್ ನಿರ್ಮಾಪಕ ಕ್ಯಾಮೆರಾನ್. ನಮ್ಮ ಮತ್ತೊಂದು ಅಧ್ಯಾಯ ಶುರು ಆಗೋಕೂ ಮುನ್ನ 4ಕೆನಲ್ಲಿ ರೀ ಮಾಸ್ಟರ್ ಆಗಿರೋ ತ್ರೀಡಿ ಹೆಚ್​ಡಿಆರ್​ ಅವತಾರ್​ನ ಥಿಯೇಟರ್​ನಲ್ಲಿ ಫೀಲ್ ಮಾಡಿ ಅಂದಿದ್ದಾರೆ ಡೈರೆಕ್ಟರ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ  

Exit mobile version