Site icon PowerTV

FIR ನಂತೆ ತನಿಖೆ ನಡೆಸಿ, ಮೃತ ಸೋನಾಲಿ ಫೋಗಟ್ ಸಹೋದರ

ಗೋವಾ: ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ ಸಾವು ಇದು ಸಹಜ ಸಾವಲ್ಲ, ಕೊಲೆ ಎಂದು ಇಂದು ಐಎಫ್​ಐಆರ್​ ದಾಖಲಿಸಿ ಈ ಹೇಳಿಕೆಯನ್ನ ಸೋನಾಲಿ ಫೋಗಟ್ ಸಹೋದರ ರಿಂಕು ಧಾಕಾ ನೀಡಿದ್ದಾರೆ.

ಆಕೆಯ (ಸೋನಾಲಿ ಫೋಗಟ್) ದೇಹದಲ್ಲಿ ಗಾಯದ ಗುರುತುಗಳಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳುತ್ತದೆ. ಪೊಲೀಸ್​ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಂತೆ ತನಿಖೆ ನಡೆಸಬೇಕು. ನನ್ನ ಸಹೋದರಿಗೆ ಗೋವಾಕ್ಕೆ ಬರುವ ಯೋಚನೆ ಇರಲಿಲ್ಲ. ಇದೆಲ್ಲಾ ಪೂರ್ವ ಯೋಜಿತ ಪಿತೂರಿ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಗೋವಾದಲ್ಲಿ ಸೋನಾಲಿಯ ಸಿನಿಮಾ ಶೂಟಿಂಗ್‌ ಇರಲಿಲ್ಲ, ಹೋಟೆಲ್‌ನಲ್ಲಿ 2 ರೂಮ್​ ಬುಕ್‌ ಮಾಡಿದ್ದು 2 ದಿನ ಮಾತ್ರ. ಚಿತ್ರದ ಶೂಟಿಂಗ್ ಆಗಸ್ಟ್ 24 ರಂದು ನಡೆಯಬೇಕಿತ್ತು. ಆದರೆ, ರೂಮ್‌ಗಳನ್ನು ಆಗಸ್ಟ್ 21 ಹಾಗೂ 22 ರಂದು ಮಾತ್ರ ಕಾಯ್ದಿರಿಸಲಾಗಿದೆ ಎಂದು ಸಹೋದರ ತಿಳಿಸಿದರು.

ಸೋನಾಲಿ ಫೋಗಟ್ ತನ್ನ ಸಹೋದ್ಯೋಗಿಗಳೊಂದಿಗೆ ಗೋವಾಕ್ಕೆ ತೆರಳಿದಾಗ ಮಂಗಳವಾರ ಬೆಳಗ್ಗೆ ಗೋವಾದಲ್ಲಿ ನಿಧನರಾಗಿದ್ದರು. ಮೇಲ್ನೋಟಕ್ಕೆ ಸೋನಾಲಿ ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಹೇಳಲಾಗಿತ್ತು. ಆದರೆ, ಈಗ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸೋನಾಲಿ ಏಕ್ ಮಾ ಜೋ ಲಾಖೋಂ ಕೆ ಲಿಯೇ ಬಾನಿ ಅಮ್ಮಾ ಧಾರಾವಾಹಿ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದ್ದರು.

Exit mobile version