Site icon PowerTV

ಪಂಚಮಸಾಲಿ’ಗೆ 2A ಮೀಸಲಾತಿ ತಪ್ಪಿಸಿದ್ದೇ ಯಡಿಯೂರಪ್ಪ: ಕಾಶಪ್ಪನವರ್ ಮಹತ್ವದ ಹೇಳಿಕೆ

ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ತಪ್ಪಿಸಿದ್ದು ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರೇ ಎಂದು ಕಾಂಗ್ರೆಸ್​ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೊಸ ಹೇಳಿಕೆ ನೀಡಿದ್ದಾರೆ.

ಶಿಗ್ಗಾಂವ್ ಪಟ್ಟಣದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ವಿಜಯಾನಂದ ಕಾಶಪ್ಪನವರ್, ಸಿಎಂ ಬಸವರಾಜ ಬೊಮ್ಮಾಯಿಯವರನ್ನ ತಿರುಪತಿಗೆ ಕರಕೊಂಡು ಹೋಗಿ, ಯಡಿಡಿಯೂರಪ್ಪನವರು ಆಣೆ ಮಾಡಿಸಿದ್ದಾರೆ. ಪಂಚಮಸಾಲಿಯವರಿಗೆ ಮೀಸಲಾತಿ ಕೊಡಬಾರದು ಅಂತಾ ಆಣೆ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮೀಸಲಾತಿ ನೀಡದಿದ್ರೆ, ಎಲ್ಲರು ಸೇರಿ ಒಂದು ಪಕ್ಷ ಮಾಡೋಣ. ಮೀಸಲಾತಿ ಹೋರಾಟ ಸಮಿತಿಯಿಂದನೆ ಅಭ್ಯರ್ಥಿ ಹಾಕೋಣ, ನಮ್ಮದು ಮೀಸಲಾತಿ ಪಕ್ಷ ಅಂತಾ ಹೆಸರು. ಆಗ ನಾವು ನಮ್ಮ ಹುಲಿ ಬಸವನಗೌಡ ಪಾಟೀಲ್ ಯತ್ನಾಳ ಅವರನ್ನ ಮುಖ್ಯಮಂತ್ರಿ ಮಾಡೋಣ, ಮೀಸಲಾತಿ ಪಕ್ಷಕ್ಕೆ ಸಿಎಂ ಅಭ್ಯರ್ಥಿ ಯತ್ನಾಳ ಎಂದು ಕಾಶಪ್ಪನವರ್​ ಮಹತ್ವದ ಹೇಳಿಕೆ ನೀಡಿದ್ದಾರೆ.

Exit mobile version