Site icon PowerTV

ತನ್ನದಲ್ಲದ ತಪ್ಪಿಗೆ ಬೆನ್ನುಮೂಳೆ ಮುರಿದುಕೊಂಡ ಯುವಕ

ಮಂಗಳೂರು : ಹೆದ್ದಾರಿ ದುರಾವಸ್ಥೆಗೆ ಅಮಾಯಕನ ಬೆನ್ನು ಮೂಳೆ ಮುರಿತ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಕಲ್ಲಡ್ಕದಲ್ಲಿ ನಡೆದಿದೆ.

ನಗರದಲ್ಲಿ, ಆಮೆಗತಿ ಕಾಮಗಾರಿ, ಹೊಂಡ ಗುಂಡಿಗಳಿಂದ ತುಂಬಿದ ರಾಷ್ಟ್ರೀಯ ಹೆದ್ದಾರಿ, ರಸ್ತೆ ಗುಂಡಿಗೆ ಬಿದ್ದ ಸರ್ಕಾರಿ ಬಸ್‌ನಲ್ಲಿದ್ದ ಯುವಕನ ಬೆನ್ನು ಮೂಳೆ ಮುರಿತ ಉಂಟಾಗಿದ್ದು, ಮೊಬೈಲ್ ಟೆಕ್ನೀಷಿಯನ್ ಆಗಿರುವ ಸುಳ್ಯದ ನಿವಾಸಿ ವಿಜಯ್ ಕುಮಾರ್ ಮಂಗಳೂರಿಗೆ ಬಂದು ಬಸ್ಸಿನಲ್ಲಿ ಹಿಂದುರುಗುತ್ತಿದ್ದಾಗ ದುರ್ಘಟನೆ ನಡೆದಿದೆ.

ಇನ್ನು, ಕಲ್ಲಡ್ಕ ರಸ್ತೆ ಗುಂಡಿಗೆ ಬಸ್ ಬಿದ್ದು ಸೀಟ್‌ನಿಂದ ಮೇಲೆ ಹಾರಿದ ಯುವಕ, ಬಸ್‌ನ ಸೀಟಿನಲ್ಲಿರುವ ರಾಡ್ ಸೊಂಟಕ್ಕೆ ತಾಗಿ ಬೆನ್ನು ಮೂಳೆ ಮುರಿತವಾಗಿದೆ. ವಿಜಯ್ ಕುಮಾರ್ ಬೆನ್ನು ಹುರಿ, ಕುತ್ತಿಗೆ ಭಾಗದ ಎಲುಬು ಭಾಗಕ್ಕೆ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅದಲ್ಲದೇ, ಬೆನ್ನು ಮೂಳೆ ಆಪರೇಷನ್‌ಗೆ ಸೂಚಿಸಿರುವ ಮಂಗಳೂರಿನ ವೈದ್ಯರು, ತನ್ನದಲ್ಲದ ತಪ್ಪಿಗೆ ವಿಜಯ್ ಕುಮಾರ್ ಬೆನ್ನುಮೂಳೆ ಮುರಿದುಕೊಂಡಿದ್ದಾರೆ. ನಿರ್ಲಕ್ಷ್ಯದ ಚಾಲನೆಯಿಂದಾಗಿ ದುರಂತ, ಬಸ್ ಚಾಲಕನ ಮೇಲೆ ಕೇಸ್ ದಾಖಲಿಸಲಾಗಿದೆ.

Exit mobile version