Site icon PowerTV

ಸಿದ್ದರಾಮೋತ್ಸವದಿಂದ ಏನು ಪ್ರಯೋಜನ ಆಗಿಲ್ಲ: ಕುಮಾರಸ್ವಾಮಿ

ಬೆಂಗಳೂರು: ಸಿದ್ದರಾಮೋತ್ಸವದಿಂದ ಸಿದ್ದರಾಮಯ್ಯ ಅವರ ವರ್ಚಸ್ಸು ಅದೇನ್ ಹೆಚ್ಚಾಗಿದೆ. ಅಂತಹ ಎಷ್ಟು ಸಮಾವೇಶ ರಾಜ್ಯದಲ್ಲಿ ಆಗಿದೆ. ನಮ್ಮ ಜನತಾ ಜಲಧಾರೆ ಎಷ್ಟು ಜನ ಸೇರಿದ್ದರು, ಅವ್ರ ಉತ್ಸವದಿಂದ ಏನು ಪ್ರಯೋಜನ ಆಗಿಲ್ಲ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಆಯ್ತು ಈಗ ಕೆಪಿಟಿಸಿಎಲ್​ ಭ್ರಷ್ಟಾಚಾರದ ವಾಸನೆ ಶುರುವಾಗಿದೆ. ಇದರ ಬಗ್ಗೆ ಚರ್ಚೆ ಆಗಬೇಕು. ಆದರೆ ಬೇರೆ ವಿಚಾರ ಚರ್ಚೆ ಆಗ್ತಾ ಇದೆ ಎಂದರು.

ಸಾವರ್ಕರ್ ರಥ ಯಾತ್ರೆ ಬಗ್ಗೆ ಮಾತನಾಡಿ,  ಈ ಯಾತ್ರೆಯಿಂದ ಜನರಿಗೆ ಏನು ಉಪಯೋಗ. ಎರಡೊತ್ತಿನ ಊಟಕ್ಕೂ ಜನ ಪರಿತಪಿಸ್ತಾ ಇದ್ದಾರೆ. ಅವರಿಗೆ ಏನಾದ್ರೂ ಮಾಡಿ ಸಾವರ್ಕರ್ ಗೆ ಗೌರವ ತಂದತೆ ಎಂದರು.

ಇನ್ನು ಎಸಿಬಿ ರದ್ದು ಕೋರಿದ್ದನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ವಿಚಾರಕ್ಕೆ ಹೋಗಿರುವ ಕುರಿತು ಮಾತನಾಡಿ, ಕುರಿ ಕಾಯಲು ತೋಳ ಬಿಟ್ಟಂಗೆ ಇದೆ. ತೋಳ ಇಟ್ಟುಕೊಂಡು ಕುರಿ ರಕ್ಷಣೆ ಆಗುತ್ತಾ. ಭ್ರಷ್ಟಾಚಾರಕ್ಕೆ ದೊಡ್ಡ ಮಟ್ಟದಲ್ಲಿ ಹಾಲೆರೆದಿದ್ದಾರೆ. ಸರ್ಕಾರ ಸರಿಯಾಗಿ ನಿಗಾ ಇಟ್ಟು ಮಟ್ಟ ಹಾಕಬೇಕು ಎಂದು ಕುಮಾರಸ್ವಾಮಿ ಹೇಳಿದರು.

Exit mobile version