Site icon PowerTV

ಊಟ ತನ್ನಿಚ್ಛೆ, ನೋಟ ಪರರಿಚ್ಛೆ ಅಲ್ಲವೇ : ದಿನೇಶ್ ಗುಂಡೂರಾವ್

ಬೆಂಗಳೂರು : ಸಿದ್ದರಾಮಯ್ಯರನ್ನ ಕಂಡ್ರೆ ಬಿಜೆಪಿಯವರಿಗೆ ನವರಂಧ್ರಗಳಲ್ಲೂ ನಡುಕ ಉಂಟಾಗಿದೆ ಎಂದು ಸರಣಿ ಟ್ವೀಟ್​​​ ಮೂಲಕ ದಿನೇಶ್ ಗುಂಡೂರಾವ್ ವಾಗ್ದಾಳಿ ಮಾಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಮಾಂಸಾಹಾರ ಆರೋಪ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನ ಕಂಡ್ರೆ ಬಿಜೆಪಿಯವರಿಗೆ ನವರಂಧ್ರಗಳಲ್ಲೂ ನಡುಕ ಉಂಟಾಗಿದೆ. ಹಾಗಾಗಿ ಬಿಜೆಪಿಯವರು ವಿವಾದ ಸೃಷ್ಟಿಸುತ್ತಿದ್ದಾರೆ. ಮಾಂಸಾಹಾರ ತಿನ್ನುವುದು ತಪ್ಪು ಅನ್ನೋದಾದ್ರೆ, ಮಾಂಸಹಾರಿಗಳು‌ ನಮ್ಮ ಪಕ್ಷಕ್ಕೆ ವೋಟ್​​​ ಹಾಕೋದು ಬೇಡ ಎಂದು ಹೇಳಲಿ ಎಂದರು.

ಇನ್ನು, ಶಾಸಕ ಸಿ.ಟಿ. ರವಿ, ಸಂಸದ ಪ್ರತಾಪ್​​​ ಸಿಂಹ ಮಲೆನಾಡಿನವರು, ಗಣೇಶನ ಹಬ್ಬದಂದು ಆ ಭಾಗದಲ್ಲಿ ಮಾಂಸಾಹಾರ ಮಾಡುತ್ತಾರೆ. ಸಿದ್ದರಾಮಯ್ಯನವರು ಏನು ತಿನ್ನಬೇಕು ಎಂಬುದನ್ನ BJPಯವರು ನಿರ್ಧರಿಸಬೇಕಾ..? ಆಹಾರ ನಮ್ಮ ಹಕ್ಕು ಇದನ್ನು ಕೇಳಲು BJPಯವರಿಗೆ ಅಧಿಕಾರ ಕೊಟ್ಟವರು ಯಾರು..? ಬೇಡರ ಕಣ್ಣಪ್ಪ ಶಿವಲಿಂಗಕ್ಕೆ ಮಾಂಸದ ನೈವೇದ್ಯ ಇಟ್ಟ ಶಿವ ಒಲಿಯಲಿಲ್ಲವೇ? ಊಟ ತನ್ನಿಚ್ಛೆ, ನೋಟ ಪರರಿಚ್ಛೆ ಅಲ್ಲವೇ ? ಎಂದು ಟ್ವೀಟ್ ಮಾಡಿದ್ದಾರೆ.

Exit mobile version