Site icon PowerTV

ಸಾಲ ವಾಪಾಸ್ ಕೇಳಿದಕ್ಕೆ ಬ್ಯಾಟ್​​ನಿಂದ ಹೊಡೆದು ಹತ್ಯೆ

ಬೆಂಗಳೂರು : ಕೊಡಿಸಿದ್ದ ಸಾಲ ವಾಪಾಸ್ ಕೇಳಿದಕ್ಕೆ ಬ್ಯಾಟ್ ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ಮುನ್ನೆಕೊಳಲು ಸಮೀಪದ ಜೆಆರ್ ಎಂ Pearl ಅಪಾರ್ಟ್ಮೆಂಟ್​​ನಲ್ಲಿ ನಡೆದಿದೆ.

ವೆಂಕಟೇಶಪ್ಪ (65) ಕೊಲೆಯಾದ ದುರ್ದೈವಿ ವೆಂಕಟೇಶಪ್ಪ, ಶಿವಪ್ಪ ಅಲಿಯಾಸ್ ಮೇಷ್ಟ್ರು ಎಂಬುವರಿಗೆ ಸಾಲ ಕೊಡಿಸಿದ್ರು. ನಂಜುಂಡರೆಡ್ಡಿ ಹಾಗೂ ಪ್ರಕಾಶ್ ಎಂಬುವರ ಕಡೆಯಿಂದ ಸಾಲ‌ಕೊಡಿಸಿದ್ರು. ಅದಕ್ಕೆ ಸಂಬಂಧಿಸಿದಂತೆ ಶಿವಪ್ಪ ಚೆಕ್ ನೀಡಿದ್ದು, ಬೌನ್ಸ್ ಆಗಿತ್ತು. ಅದನ್ನ ಕೇಳಲೆಂದು ವೆಂಕಟೇಶಪ್ಪ ಸಾಲಗಾರರೊಂದಿಗೆ ಶಿವಪ್ಪನ ಅಪಾರ್ಟ್ಮೆಂಟ್ ಬಳಿ ಬಂದಿದ್ರು. ಆ ವೇಳೆ ಕ್ರಿಕೆಟ್ ಬ್ಯಾಟ್​​​ನಿಂದ ಹೊಡೆದು ಹತ್ಯೆ ಮಾಡಿದ್ದಾರೆ.

ಅದಲ್ಲದೇ, ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ತಲೆಮರೆಸಿಕೊಂಡಿರುವ ಶಿವಪ್ಪನಿಗಾಗಿ ಶೋಧ ನಡೆಸುತ್ತಿದ್ದಾರೆ. ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version