Site icon PowerTV

ಸಮಯ ಬಂದಾಗ ರಾಜ್ಯ ಸರ್ಕಾರದ ಮುಖವಾಡ ಬಿಚ್ಚಿಡುವೆ: ಭಾಸ್ಕರ್​ ರಾವ್​

ಬಾಗಲಕೋಟೆ: ಸ್ವಾಭಿಮಾನಿ ಅಧಿಕಾರಿಗಳು ಯಾರು ಸಹ ಇಂತಹ ಸರ್ಕಾರದಲ್ಲಿ ಇಷ್ಟಪಡಲ್ಲ. ಎಲ್ಲಾ ಕಚೇರಿಗಳಲ್ಲೂ ಶೇ 40% ದುಡ್ಡು ವಸೂಲಿ ಹಾವಳಿ ಆಗುತ್ತಿದೆ ಎಂದು ಆಮ್ ಆದ್ಮಿ ಮುಖಂಡ ಭಾಸ್ಕರ್ ರಾವ್  ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇಂತಹ ಸರ್ಕಾರದ ನಡೆಯಿಂದ ಸ್ವಾಭಿಮಾನಿ ಜನರು ಬದುಕಲು ಇಷ್ಟಾ ಪಡ್ತಾರಾ, ನಾನು ಸರ್ಕಾರದ ಒಳಗಿದ್ದು ಕೆಲಸ ಮಾಡಿದ್ದೇನೆ. ನನಗೆ ಸಾಕಷ್ಟು ಸರ್ಕಾರದ ಲೋಪಗಳು ನನಗೆ ಮಾಹಿತಿ ಇದ್ದೆ ಇರುತ್ತೆ. ಅದರ ಬಗ್ಗೆ ಪ್ರಚಾರ ಮಾಡಬೇಕಾದ ಅವಶ್ಯಕತೆ ಇಲ್ಲ. ಅವುಗಳ ಅವಶ್ಯಕತೆ ಬಿದ್ದಾಗ ಬಳಕೆ ಮಾಡುತ್ತೇನೆ. ಸರ್ಕಾರಕ್ಕೆ ಭಾಸ್ಕರ್ ರಾವ್ ಭಯವಿದೆ ಎಂದರು.

ಸರ್ಕಾರದ ಮನೆ ಒಳಗೆ ಇದಿನಿ ಅಂದ್ರೆ ಆ ಮನೆಯಲ್ಲಿ ಎಲ್ಲ ಬೆಳವಣಿಗೆಯೂ ನಮಗೆ ಗೊತ್ತಿರುತ್ತದೆ. ಸಮಯ ಸಂದರ್ಭ ಬಂದಿಲ್ಲ, ಸಮಯ ಬಂದಾಗ ಅವುಗಳ ಬಗ್ಗೆ ಮಾತನಾಡುತ್ತೇನೆ. ನಮ್ಮನ್ನ ಸಮಸ್ಯೆಗೆ ಸಿಲುಕಿಸಿದಾಗ ನಮ್ಮ ರಕ್ಷಣೆಗೆ ಆಗ ಅವುಗಳನ್ನ ಬಳಕೆ ಮಾಡುತ್ತೇನೆ. ನಾನು ನಿಮ್ಮ ನೌಕರಿನೇ ಬೇಡ ಅಂತಾ ಬಂದಿದ್ದೇನೆ, ಆದ್ರೂ ರಾಜಿನಾಮೆ ಅಂಗಿಕರಿಸಿಲ್ಲ. ಅದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಭಾಸ್ಕರ್ ರಾವ್ ಹೇಳಿದರು.

Exit mobile version