Site icon PowerTV

ವಿವಾದ ಮಾಡುವುದರಲ್ಲಿ ಬಿಜೆಪಿಗರು ನಿಸ್ಸೀಮರು: ಆರ್‌.ಧ್ರುವನಾರಾಯಣ

ಚಾಮರಾಜನಗರ : ಬಿಜೆಪಿಗರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲಾ, ವಿವಾದ ಎಳೆಯುವದರಲ್ಲಿ ನಿಸ್ಸೀಮರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಾಣ ಕಿಡಿಕಾರಿದರು.

ನಗರದಲ್ಲಿ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಿನ ಜ್ವಲಂತ ಸಮಸ್ಯೆ, ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲಾ, ವಿವಾದ ಮಾಡುವುದರಲ್ಲಿ ನಿಸ್ಸೀಮರು, ಜನರ ಮನಸ್ಸನ್ನು ಬೇರೆಡೆಗೆ ಸೆಳೆದು ಸಣ್ಣದನ್ನು ದೊಡ್ಡದು ಮಾಡುತ್ತಾರೆ ಎಂದು ಮಾಂಸ ಸೇವಿಸಿ ಸಿದ್ದರಾಮಯ್ಯ ದೇಗುಲಕ್ಕೆ ಭೇಟಿ ಬಗ್ಗೆಗಿನ ಬಿಜೆಪಿ ಟೀಕೆಗೆ ಆಕ್ರೋಶ ಹೊರಹಾಕಿದರು.

ಮೊಟ್ಟೆ ಎಸೆತ ಸಂಬಂಧ ಮಾತನಾಡಿ, ಬಿಜೆಪಿಯವರು ಅವಮಾನಿಯವಾಗಿ ನಡೆದುಕೊಂಡಿದ್ದಾರೆ. ಬಿಜೆಪಿಯವರಿಗೆ ಸುಳ್ಳೇ ಅವರ ಮನೆಯ ದೇವರು, ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು.‌ ಮೊಟ್ಟೆ ಒಡೆದ ವ್ಯಕ್ತಿ ಬಿಜೆಪಿಯ ಕಾರ್ಯಕರ್ತ, ಅವನು ಆರ್ ಎಸ್ ಎಸ್ ಹಾಗೂ ಅಪ್ಪಚ್ಚು ರಂಜನ್ ಜೊತೆ ಇರುವ ಪೋಟೋ ಗಿಂತ ಸಾಕ್ಷಿ ಬೇಕೇ ಎಂದು ಆಕ್ರೋಶ ಹೊರಹಾಕಿದರು.
ಈಗಾಗಲೇ ಘಟನೆಯ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದೇವೆ. ಉನ್ನತ ಮಟ್ಟದ ತನಿಖೆಯಾಗಬೇಕು , 26 ರಂದು ಎಸ್ಪಿ ಕಚೇರಿ ಮುತ್ತಿಗೆ ಹಾಕುತ್ತೇವೆ ಎಂದು ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದರು.

Exit mobile version