Site icon PowerTV

ಬೆಳಗಾವಿಯಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ

ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಚಿರತೆ ಹಾವಳಿಗೆ ಜನ ಕಂಗಾಲಾಗಿದ್ದಾರೆ. ಇಂದು ಬೆಳ್ಳಂ ಬೆಳಿಗ್ಗೆ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಕ್ಲಬ್ ರಸ್ತೆಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದ ಒಂದು ಭಾಗದಿಂದ ಕೋಂಬಿಂಗ್ ಮಾಡುತ್ತ, ಚಿರತೆಯನ್ನು ಬಲೆ ಕಡೆ ಓಡಿಸಿದರು. ಈ ವೇಳೆ 2-3 ಸೆಕೆಂಡ್​ಗಳಲ್ಲಿ ರಸ್ತೆ ಡಿವೈಡರ್ ಹಾರಿ, ತಂತಿ‌ಬೇಲಿ ತುಂಡರಿಸಿ ಪೋದೆಯೊಳಗೆ ಕಾಣೆಯಾಯಿತು. ಅರವಳಿಕೆ ಗನ್ ಹಿಡಿದಿದ್ದ ಸಿಬ್ಬಂದಿ ಶೂಟ್ ಮಾಡಲು ವಿಫಲರಾದರು. ಚಿರತೆ ತಪ್ಪಿಸಿಕೊಂಡ ತಕ್ಷಣ ಡ್ರೋನ್​ ಮೂಲಕವೂ ಕಾರ್ಯಾಚರಣೆ ನಡೆಸಿದ್ದಾರೆ, ಗಾಲ್ಫ್ ಮೈದಾನ ಸುತ್ತಲಿನ 22 ಶಾಲೆಗಳಿಗೂ ರಜೆ ಘೋಷಿಸಿದ್ದಾರೆ

ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಚಿರತೆ ಹಾವಳಿ ಇದೆ. ಗಾಲ್ಫ್ ನಲ್ಲಿರುವ ಒಂದು ಚಿರತೆ ಇಂದು ಕಾಣಿಸಿಕೊಂಡಿದೆ. ಮುಂಜಾಗ್ರತಾ ಕ್ರಮಗಳನ್ನ ನಮ್ಮ ಸಿಬ್ಬಂದಿ ಕೈಗೊಂಡಿದ್ದಾರೆ. ನಾಳೆ ಬೆಳಗ್ಗೆ ಇಬ್ಬರು ಶೂಟರ್ಸ್ ಬರ್ತಾ ಇದ್ದಾರೆ. 120ಅರಣ್ಯ ಇಲಾಖೆ ಸಿಬ್ಬಂದಿ, 80ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಚಿರತೆ ನಾಯಿ ಮರಿ ಅಲ್ಲಾ ಅದು ಚಿರತೆ ಮರಿ ಆದಷ್ಟು ಬೇಗ ಹಿಡಿಯುತ್ತೇವೆ. ಎರಡು ಆನೆಗಳು ಸಕ್ರೆಬೈಲ್ ನಿಂದ ಈಗ ಬರ್ತಿವೆ. ಎರಡ್ಮೂರ ದಿನಗಳಲ್ಲಿ ಕಾರ್ಯಾಚರಣೆ ಮಾಡಿ ಚಿರತೆ ಹಿಡಿಯುತ್ತೇವೆ‌. ಅಂತಾ ಹೇಳಿದ್ರು.
ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷವಾದ ವಿಚಾರವಾಗಿ ಅರಣ್ಯ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಭಾಂಗಣದಲ್ಲಿ ತುರ್ತು ಸಭೆ ನಡೆಯಿತು. ಜಿಲ್ಲಾಧಿಕಾರಿ, SP, ನಗರ ಪೊಲೀಸ್ ಆಯುಕ್ತ & ಅರಣ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಚಿರತೆ ಕಾರ್ಯಾಚರಣೆ ಕುರಿತು ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿ, ನಾಳೆ ಬೆಳಗ್ಗೆ ಇಬ್ಬರು ಶೂಟರ್ಸ್ ಬರ್ತಾರೆ,120ಅರಣ್ಯ ಇಲಾಖೆ ಸಿಬ್ಬಂದಿ, 80ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.

ಚಿರತೆ ನಾಯಿ ಮರಿ ಅಲ್ಲಾ ಅದು ಚಿರತೆ ಮರಿ ಆದಷ್ಟು ಬೇಗ ಹಿಡಿಯುತ್ತೇವೆ ಎಂದು ಸಭೆಯ ಬಳಿಕ ಸಚಿವ ಉಮೇಶ್​ ಕತ್ತಿ ಉಡಾಫೆ ಉತ್ತರ ನೀಡಿದರು ಎರಡ್ಮೂರ ದಿನಗಳಲ್ಲಿ ಕಾರ್ಯಾಚರಣೆ ಮಾಡಿ ಚಿರತೆ ಹಿಡಿಯುತ್ತೇವೆ‌ ಎಂದರು.

ಒಟ್ಟಿನಲ್ಲಿ ಚಿರತೆ ಭಯಕ್ಕೆ ಬೆಚ್ಚಿಬಿದ್ದು ಜನರು ಆದಷ್ಟು ಬೇಗ ಚಿರತೆ ಪತ್ತೆ ಹಚ್ಚಲಿ ಅಂತಾ ಜನರ ಒತ್ತಾಯವಾಗಿದ್ದರೆ ಇತ್ತ, ನಾಳೆ ಆನೆಗಳು ,ಶಾರ್ಪ ಶೂಟರ್ ಮತ್ತು ನಾಯಿಗಳಿಂದ. ದೊಡ್ಡ ಮಟ್ಟದಲ್ಲಿ ಚಿರತೆ ಶೋಧ ಕಾರ್ಯ ನಡೆಸಲಿದ್ದಾರೆ. ನಾಳೆ ಚಿರತೆ ಬೋನಿಗೆ ಬೀಳುತ್ತಾ ಇಲ್ಲಾ ಕಾದುನೋಡಬೇಕು.

ಅಣ್ಣಪ್ಪ ಬಾರ್ಕಿ ಪವರ್ ಟಿವಿ ಬೆಳಗಾವಿ

Exit mobile version