Site icon PowerTV

ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ಪುಂಡಾಟಿಕೆ

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಪುಂಡರ ಪುಂಡಾಟಿಕೆ ಮುಂದುವರೆದಿದ್ದು, ಈ ಬಾರಿ ಪುಂಡಾಟಕ್ಕೆ ಹುಡುಗಿಯೂ ಕೂಡ ಸಾಥ್​ ನೀಡಿದ್ದಾಳೆ.

ನಗರದ ಬ್ಯುಝಿ ರಸ್ತೆಯಲ್ಲಿ ಸೈಯ್ಯದ್​ ಎಂಬ ಪುಂಡ, ಹುಡುಗಿಯನ್ನು ಹಿಂದೆ ಕೂರಿಸಿಕೊಂಡು ವ್ಹೀಲಿಂಗ್​ ಮಾಡಿದ್ದು, ವ್ಹೀಲಿಂಗ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಆಪ್ ಲೋಡ್ ಮಾಡಿದ್ದಾನೆ. ಜಕ್ಕೂರು ರಸ್ತೆ ತುಮಕೂರು ರಸ್ತೆ , ನಗರದ ಹೊರವಲಯ ರಸ್ತೆ , ಬಿ. ಇ. ಎಲ್ ರಸ್ತೆಗಳು ವ್ಹೀಲಿಂಗ್ ಮಾಡುವವರಿಗೆ ಹಾಟ್ ಸ್ಪಾಟ್ ಆಗಿದ್ದು, ಕಿಡಿಗೇಡಿಗಳು ಕೈಯಲ್ಲಿ ಡ್ರ್ಯಾಗರ್ ಹಿಡಿದು ವ್ಹೀಲಿಂಗ್ ಮಾಡಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಪ್ ಲೋಡ್ ಮಾಡುತ್ತಿದ್ದಾರೆ. ಹೀಗೆ ನಗರದ ಅನೇಕ ಕಡೆ ಪುಂಡರು ನಡು ರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ವಿಲ್ಹಿಂಗ್ ಮಾಡುತ್ತಿದ್ದಾರೆ.

Exit mobile version