Site icon PowerTV

ಚಹಲ್-ಧನಶ್ರೀ ವೈವಾಹಿಕ ಬಿರುಕು: ಎರಡನೇ ಬಾರಿಗೆ ಸ್ಪಷ್ಟನೆ ನೀಡಿದ ಧನಶ್ರೀ.!

ನವದೆಹಲಿ: ಭಾರತದ ಸ್ಪೀನ್ ಬೌಲರ್​ ಯುಜ್ವೇಂದ್ರ ಚಹಾಲ್​ ಮತ್ತು ಪತ್ನಿ ಧನಶ್ರೀ ವರ್ಮಾ ಅವರು ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಬಗ್ಗೆ ಚಹಲ್ ಪತ್ನಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣ ಮೂಲಕ ಸುದೀರ್ಘವಾಗಿ ಉತ್ತರ ನೀಡಿದ್ದಾರೆ.

ತಮ್ಮ ಜೀವನದ ಬಗ್ಗೆ ಆಧಾರವಿಲ್ಲದ ವದಂತಿಗಳ ಬಗ್ಗೆ ಮಾತನಾಡಿದ ವರ್ಮಾ, ನಮ್ಮ ವೈಯಕ್ತಿಕ ಸಂಬಂಧದ ಬಗ್ಗೆ ಊಹಾಪೋಹಗಳು ಸುದ್ದಿಗಳು ನೋವುಂಟುಮಾಡಿದೆ ಎಂದು ಧನಶ್ರೀ ಹೇಳಿದ್ದಾರೆ.

ಧನಶ್ರೀ ಅವರು ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ಹೇಳಿದ್ದಾರೆ. ಚಾಹಲ್, ಇತರರ ಬೆಂಬಲದಿಂದಾಗಿ ತನ್ನ ಗಾಯದ ಸಮಯದಲ್ಲಿ ತಾನು ಕಷ್ಟಕರವಾದ ದಿನವನ್ನ ಎದುರಿಸಿದ್ದೇನೆ ಎಂದು ಅವರು ಬರೆದಿದ್ದಾರೆ.

ಚೇತರಿಸಿಕೊಳ್ಳಲು ಕೆಲವು ದಿನ ವಿಶ್ರಾಂತಿ ಪಡೆಯಬೇಕು. ನಾನು ಕಳೆದ 14 ದಿನಗಳಿಂದ ಚೇತರಿಕೆ ಕಾಣುತ್ತೇನೆ ಇಲ್ವೊ ಎಂಬ ಆತಂಕ ನನ್ನಲ್ಲಿ ಇತ್ತು. ನೃತ್ಯ ಮಾಡುವಾಗ ಸಂಭವಿಸಿದ ಮೊಣಕಾಲಿನ ಗಾಯದಿಂದಾಗಿ ನಾನು ಸಂಪೂರ್ಣವಾಗಿ ಆತ್ಮವಿಶ್ವಾಸವನ್ನು ಕಳೆದುಕೊಂಡೆ. ಸದ್ಯ ನಾನು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ತಮ್ಮ ಗಾಯದ ಸಮಸ್ಯೆ ಹೇಳಿಕೊಂಡಿದ್ದಾರೆ.

Exit mobile version