Site icon PowerTV

ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಐವರು ಆರೋಪಿಗಳು ಅಂದರ್​.!

ಸಾಂದರ್ಭಿಕ ಚಿತ್ರ

ಬಳ್ಳಾರಿ/ವಿಜಯನಗರ: ಖೋಟಾ ನೋಟು ಚಲಾವಣೆ ಮಾಡಲು ಬಂದಿದ್ದವರನ್ನು ಮಾಲು ಸಮೇತ ವಿಜಯನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣ ಪೊಲೀಸ್​ ವ್ಯಾಪ್ತಿಯಲ್ಲಿ 500 ರೂ ಮುಖ ಬೆಲೆಯ 1 ಲಕ್ಷದ 56 ಸಾವಿರದ ಮೌಲ್ಯದ ಖೋಟೋ ನೋಟುಗಳು ಪತ್ತೆಯಾಗಿದ್ದು, ಇದನ್ನಿಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ಜಿಲ್ಲೆಯ ಕುಬೇರಪ್ಪ( 58) ಶಿವಮೊಗ್ಗ ಜಿಲ್ಲೆಯ ರುದ್ರೇಶ್( 39) ಮಂಡ್ಯ ಜಿಲ್ಲೆಯ ಎಸ್. ರಾಜೇಶ್(28) ಮೈಸೂರು ಜಿಲ್ಲೆಯ ಪ್ರಶಾಂತ್( 30) ಮಂಡ್ಯ ಜಿಲ್ಲೆಯ ರವಿ( 30) ಬಂಧಿತ ಆರೋಪಿಗಳು ಖೋಟೋ ನೋಟು ಚಲಾವಣೆಗೆ ಬಂದಿದ್ದಾರೆ.

ಬಂಧಿತರು ಸಪೇಟೆ ನಗರದ ರಾಣಿಪೇಟೆಯ ವೆಂಕಟೇಶ್ವರ ಲಾಡ್ಜ್ ನಲ್ಲಿ ಬಂದು ತಂಗಿದ್ದರು. ಖಚಿತ ಮಾಹಿತಿ ಮೇರೆಗೆ ಸಿಪಿಐ ಜಯಪ್ರಕಾಶ್ ರಿಂದ ಖೋಟಾ ನೋಟು ಸಮೇತ ಆರೋಪಿಗಳ ಬಂಧನ ಮಾಡಲಾಗಿದೆ. ಈ ಬಗ್ಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version