Site icon PowerTV

ಹುಣಸೂರು ಜೆಡಿಎಸ್​ ಟಿಕೆಟ್​ ನನಗೆ, ಬಹಿರಂಗವಾಗಿ ಹೇಳಿಕೆ ನೀಡಿದ ಸೋಮಶೇಖರ್.!

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದ ಸೋಮಶೇಖರ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಹೂಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಗಾಗಿ ಜಿದ್ದಾಜಿದ್ದಿ ನಡೆಯಲಿದೆ.

ಈಗಾಗಲೇ ಮಾಜಿ ಸಚಿವ ಜಿ.ಟಿ ದೇವೆಗೌಡ ಪುತ್ರ ಜಿ.ಡಿ ಹರೀಶ್​ಗೌಡ ಅವರು ಹುಣಸೂರು ಜೆಡಿಎಸ್​ ಟಿಕೇಟ್ ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಈಗ ಸೋಮಶೇಖರ್​ ಅವರು 2023 ಜೆಡಿಎಸ್​ ಟಿಕೆಟ್​ ನನಗೆ ಎಂದಿದ್ದಾರೆ. ಈ ಮೂಲಕ ಸೋಮಶೇಖರ್, ಜಿ‌ಡಿ ಹರೀಶ್ ಗೌಡ ನಡುವೆ ಈಗಿನಿಂದಲೇ ಟಿಕೆಟ್​ ಪಡೆಯಲು ಜಿದ್ದಾಜಿದ್ದಿ ಏರ್ಪಡುತ್ತಿದೆ.

ಪ್ರಭಾವಿ ನಾಯಕರು ಬಂದ್ರೂ ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ವರಿಷ್ಠರು ನನಗೆ ಹೇಳಿದ್ದಾರೆ. ಖಂಡಿತವಾಗಿ ನಾನೇ ಹುಣಸೂರು ಕ್ಷೇತ್ರದ ಅಭ್ಯರ್ಥಿ ಆಗಿರುತ್ತೇನೆ‌ ಎಂದು ಸೋಮಶೇಖರ್ ಹೇಳಿದರು.

ಈಗಾಗಲೇ ಕ್ಷೇತ್ರದಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಸೋಮಶೇಖರ್ ಎಂದು ಹೇಳಲಾಗುತ್ತಿದೆ. ಈಗ ಬಹಿರಂಗವಾಗಿ ಸೋಮಶೇಖರ್​ ಹೇಳಿಕೆ ನೀಡಿದ್ದಾರೆ.

Exit mobile version