Site icon PowerTV

ಮನೆ ದೇವರಿಗೆ ಮೊಮ್ಮಗನ ಮುಡಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ.!

ಹಾಸನ: ನಟ, ಯುವ ಜೆಡಿಎಸ್​ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಪುತ್ರ ಆವ್ಯನ್ ದೇವ್ಗೆ ಇಂದು ಮುಡಿ ಶಾಸ್ತ್ರ ಮಾಡಲಾಯಿತು.

ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಯಲಿಯೂರು ಲಕ್ಷ್ಮಿ ದೇವಾಲಯದಲ್ಲಿ ಮುಡಿ ನೀಡಿ ಕುಟುಂಬ ಸಮೇತಾ ಪೂಜೆ ಮಾಡಿಸಿದರು. ಲಕ್ಷ್ಮೀ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ದೇವೇಶ್ವರ ದೇಗುಲದಲ್ಲಿ ಕೂಡ ಪೂಜೆ ಮಾಡಿಸಿದರು.

ಸ್ವಗ್ರಾಮ ಹರದನಹಳ್ಳಿಯಲ್ಲಿರೋ ಮನೆದೇವರು ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಪುತ್ರ ನಿಖಿಲ್‌ ಕುಮಾರಸ್ವಾಮಿ, ಸೊಸೆ ರೇವತಿ ಹಾಗೂ ಮೊಮ್ಮಗನ ಜೊತೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

Exit mobile version