Site icon PowerTV

ವೈದ್ಯರ ಮೇಲೆ ಹಲ್ಲೆ ಮಾಡಿದ ಮಿಜೋರಾಂ CM ಪುತ್ರಿ: ಕ್ಷಮೆ ಯಾಚಿಸಿದ ಸಿಎಂ

ಮಿಜೋರಾಂ: ಇಲ್ಲಿನ ಸಿಎಂ ಪುತ್ರಿ ಮಿಲಾರಿ ಚಾಂಗ್ಟೆ ಅವರು ಇತ್ತೀಚೆಗೆ ಕ್ಲಿನಿಕ್‌ ಒಂದರಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ. ಬಳಿಕ ಇಂದು ತಮ್ಮ ಮಗಳ ನಡೆಯ ಮಿಜೋರಾಂ ಸಿಎಂ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.

ಮಿಜೋರಾಂನ ಸಿಎಂ ಝೋರಂತಾಂಗ್‌ ಮಗಳು ವೈದ್ಯರಿಗೆ ಹಲ್ಲೆ ಮಾಡಿದ ವಿಡಿಯೋ ದೇಶ ಮಟ್ಟದಲ್ಲಿ ವ್ಯಾಪಾಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಇಂದು ಮಿಜೋರಾಂ ಸಿಎಂ ಕ್ಷಮೆ ಕೇಳಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಮೂಲಕ ಸಿಎಂ ಪೊಸ್ಟ್​ ಮಾಡಿ ತಮ್ಮ ಮಗಳ ನಡವಳಿಕೆ ಬಗ್ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಈ ವರ್ತನೆಯನ್ನು ಯಾವುದೇ ರೀತಿಯಲ್ಲಿ ಸಮರ್ಥಿಸುವುದಿಲ್ಲ ಎಂದು ಹೇಳಿದ್ದಾರೆ. ಸಿಎಂ ಮಗಳ ಹಲ್ಲೆಯನ್ನ ವೈದ್ಯಕೀಯ ವಲಯವು ಖಾರವಾಗಿ ಖಂಡಿಸಿತ್ತು.

Exit mobile version