Site icon PowerTV

ಮೊಟ್ಟೆ ಹೊಡೆಯೋಕೆ ಬಂದ್ರೆ, ನಾವು ಸುಮ್ಮನಾಗಬೇಕಾ : ಹೆಚ್.ಸಿ.ಮಹದೇವಪ್ಪ

ಚಿಕ್ಕಬಳ್ಳಾಪುರ : ರಾಮಮಂದಿರ ಕಟ್ಟೋಕೆ ಇಟ್ಟಿಗೆ ತಗೊಂಡು ಹೋದರು. ಇದೀಗ ರಾಮನವಮಿಯಲ್ಲಿ ಮಜ್ಜಿಗೆ ಹಂಚೋಕೆ ಹೋದರೆ 5 &gst ಹಾಕ್ತಾರೆ ಎಂದು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಇನ್ನಿಲ್ಲದ ಅಪಪ್ರಚಾರ ನಡೆಸ್ತಿದ್ದಾರೆ. ದಾವಣಗೆರೆ ಸಿದ್ದರಾಮಯ್ಯ ಅವರ ಮಾಋತ ಮಹೋತ್ಸವ ಕಂಡು ಹೊಟ್ಟೆ ಕಿಚ್ಚು ಪಡ್ತಿದ್ದಾರೆ. ಉತ್ತಮ ಆಡಳಿತ ಕೊಟ್ಟ ಸಿದ್ದರಾಮಯ್ಯರ ನಂತರ ಬಂದ ಸರ್ಕಾರ ಬೆಲೆ ಏರಿಕೆ ಬಡವರಿಗೆ ಬತೆ ಏಳಿದ್ದಾರೆ ಎಂದರು.

ಇನ್ನು, ಸಿದ್ದರಾಮಯ್ಯ ಬರಪೀಡಿತ ಭಾಗದ ಭಗೀರಥ. ಸಮಾಜವನ್ನು ಕಟ್ಟುವ ಸಮಾಜವಾದಿ ಸಿದ್ದರಾಮಯ್ಯರು ಕೋಮುವಾದಿಗಳಿಗೆ ಬೇಕಾಗಿಲ್ಲ. ಸಂವಿಧಾನವನ್ನ ನಾವು ಉಳಿಸಿದರೆ ನಾವು ಉಳಿಯುತ್ತೇವೆ. ಸಂವಿಧಾನ ಉಳಿವಿಗೆ ಸಿದ್ದರಾಮಯ್ಯ ಮುಂದಾದರೆ ಮನುವಾದಿಗಳು ಸಹಿಸಲಾಗ್ತಿಲ್ಲ. ಸಿದ್ದರಾಮಯ್ಯ ಧ್ವನಿ ಅಡಗಿಲು ಮೊಟ್ಟೆ ಹೊಡೆಯೋ ಕೆಲಸ ಮಾಡ್ತಿದ್ದಾರೆ. ಮೊಟ್ಟೆ ಹೊಡೆಯೋಕೆ ಬಂದ್ರೆ, ನಾವು ಸುಮ್ಮನಾಗಬೇಕಾ..? ಬ್ರಾಹ್ಮಣತ್ವದಿಂದ ಶೂದ್ರ ಬಿಡುಗಡೆಯಾಗದ ಹೊರತು ನಾವು ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಅದಲ್ಲದೇ, ಸಿದ್ದರಾಮಯ್ಯ ಆಡಳಿತ ಆದಷ್ಟು ಬೇಗ ಬರಲಿ ಅಂತ ಜನ ಬಯಸಿದ್ದಾರೆ. ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ದೊಂಬಿಗೆ ಇಳಿದಿದ್ದಾರೆ. ಹಿಂದು ಮುಸ್ಲಿಂರು ಸೋದರತೆಯಿಂದ ಬಾಳಲು ನಾವೆಲ್ಲ ಮುಂದಾಗಬೇಕು ಎಂದರು.

Exit mobile version