Site icon PowerTV

ಕಾರಿನ ಮೇಲೆ ಮೊಟ್ಟೆ ಎಸೆದಿದ್ದನ್ನು ಖಂಡಿಸುವೆ : ಈಶ್ವರ ಖಂಡ್ರೆ

ಬೆಂಗಳೂರು : ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಕಾರಿನ ಮೇಲೆ ಸಮಾಜಘಾತುಕ ಶಕ್ತಿಗಳು ಮೊಟ್ಟೆ ಎಸೆದಿವೆ. ಇದೊಂದು ಹೀನ ಕೃತ್ಯ ಇದನ್ನು ನಾನು ಖಂಡಿಸುತ್ತೇನೆ. ನೆರೆ ವಿವರವಾಗಿ ಸಿದ್ದರಾಮಯ್ಯ ಅಧ್ಯಯನ ಮಾಡಲು ಹೋಗಿದ್ರು.ಈ ವೇಳೆ ಸರ್ಕಾರದ ಪ್ರಾಯೋಜಕತ್ವದಲ್ಲಿ ಕೃತ್ಯ ನಡೆದಿದೆ. ಕಾಂಗ್ರೆಸ್ ನೋಡಿ ಬಿಜೆಪಿಗೆ ಭಯ ಬಂದಿದೆ. ಇದರಿಂದ ನಾನಾ ಮಾರ್ಗದ ಮೂಲಕ ಕೆಲವರನ್ನು ಭಯ ಬೀಳಿಸುವ ಪ್ರಯತ್ನ ನಡೀತಿದೆ ಎಂದರು.

ಬಿಜೆಪಿ ರೂಪಿಸುವ ಯಾವುದೇ ತಂತ್ರಕ್ಕೂ ಕಾಂಗ್ರೆಸ್ ಹೆದರಲ್ಲ. ಮೊಟ್ಟೆ ಎಸೆದವನು ಕಾಂಗ್ರೆಸ್ ಕಾರ್ಯಕರ್ತ ಅನ್ನೋದು ದೊಡ್ಡ ಷಡ್ಯಂತ್ರ. ಅವನು ಯಾರ ಜೊತೆ ಇದ್ದಾನೆ ಅನ್ನೋದು ಫೋಟೋದಿಂದಲೇ ಗೊತ್ತಾಗಿದೆ. ಅವನನ್ನು ಜೈಲಿಂದ ಬಿಡಿಸಿದವರು ಯಾರು ಅನ್ನೋದು ದಾಖಲೆಗಳು ಇದ್ದಾವೆ. ಇದರಿಂದಲೇ ಗೊತ್ತಾಗುತ್ತೆ ಕಾನೂನು ಸಾಮರಸ್ಯ ಕದಡಲು ಈ ಪ್ರಯತ್ನ ಮಾಡಿದ್ದಾರೆ ಅಂತ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ಮಾಡಿದ್ದಾರೆ.

Exit mobile version