Site icon PowerTV

ಕೇಂದ್ರದಲ್ಲಿ ಸ್ಥಾನಮಾನ ಸಿಗುತ್ತಿದ್ದಂತೆ ಕ್ರಿಯಾಶೀಲರಾದ BSY..!

ಬೆಂಗಳೂರು : ಹೌದು, ಕಳೆದ ಮೂರು ದಿನದ ಹಿಂದೆ ಬಿಎಸ್‌ವೈಗೆ ಕೇಂದ್ರದಲ್ಲಿ ಹೈಕಮಾಂಡ್ ಮಣೆ ಹಾಕಿದೆ ತಡ, ರಾಜಾಹುಲಿ ಫುಲ್‌ ಆ್ಯಕ್ಟೀವ್‌ ಆಗಿದೆ. ಒಂದು ವರ್ಷದಿಂದ ಫುಲ್‌ ಸೈಲೆಂಟ್‌ ಆಗಿದ್ದ ರಾಜಾಹುಲಿ, ಇದೀಗ ಗರ್ಜಿಸಲು ಆರಂಭಿಸಿದೆ. ೨೦೨೩ರ ಚುನಾವಣೆಯಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿರೋ ಬಿಎಸ್‌ವೈ ಬಿಜೆಪಿ ಕಚೇರಿಯಲ್ಲಿ ಸಿಎಂ ಹಾಗೂ ಅಧ್ಯಕ್ಷರ ಜೊತೆ ಸೇರಿ ಸೋತ ಅಭ್ಯರ್ಥಿಗಳ ಸಭೆ ನಡೆಸಿದ್ರು.

ಇನ್ನು ಬೆಳಗ್ಗೆ ಸೋತ ಬೆಂಗಳೂರಿನ ಎಂಎಲ್‌ಎಗಳ ಜೊತೆ ತ್ರಿಮೂರ್ತಿಗಳು ಮಹತ್ವದ ಸಭೆ ನಡೆಸಿದ್ರು. ಕಳೆದ ಬಾರಿಯ ಸೋಲು ಹೇಗೆ ಅಯ್ತು ಎಂದು ಚರ್ಚೆ ನಡೆಸಿದ ನಾಯಕರು‌, ಮುಂದಿನ‌ ಚುನಾವಣೆಯಲ್ಲಿ ಆ ಕ್ಷೇತ್ರದಲ್ಲಿ ಏನು ಮಾಡಬೇಕೆಂದು ಸುದೀರ್ಘ ಚರ್ಚೆ ನಡೆಸಿದ್ರು. ಇದಾದ ಬಳಿಕ‌ ಮಧ್ಯಾಹ್ನ ಎಂಎಲ್‌ಸಿಗಳ ಜೊತೆ‌ ಅಧ್ಯಕ್ಷ ನಳೀಲ್‌ ಕುಮಾರ್‌ ಕಟಿಲ್‌ ಸಭೆ ನಡೆಸಿದ್ರು. ಪ್ರಮುಖವಾಗಿ ಸಭೆಯಲ್ಲಿ 30ರ ಟಾಸ್ಕ್‌ ನೀಡಲಾಗಿದೆ.

ಒಬ್ಬ ಸೋತ‌ ಅಭ್ಯರ್ಥಿಗಳಿಗೆ 30 ಬೂತ್‌ಗಳ ಜವಾಬ್ದಾರಿ ನೀಡಿದ್ರು. ಈ ವೇಳೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ರು.. ಇದು ಪರಜಿತರಿಗಷ್ಟೇ ಅಲ್ಲ. ಗೆದ್ದಿರೋ ಶಾಸಕರು ಸಹ ಬೂತ್ ಮಟ್ಟದಲ್ಲಿ ಸಂಘಟನೆಯ ಬಗ್ಗೆನ ಹರಿಸುವಂತೆ ಸೂಚಿಸಿದ್ರು.

ಒಟ್ಟಿನಲ್ಲಿ ಒಂದು ಕಡೆ ಬಿಜೆಪಿ‌ ತನ್ನ ಅಸ್ಥಿತ್ವಕ್ಕಾಗಿ ಪಕ್ಷ ಸಂಘಟನೆ ಮಾಡೋದ್ರಲ್ಲಿ ಬ್ಯುಸಿಯಾದೆ. ಇತ್ತ ಕಾಂಗ್ರೆಸ್ ಬಿಜೆಪಿ ಹುಳುಕನ್ನ ತೋರಿಸಲು ಹೊರಟಿದ್ದು, ಎರಡು ಪಕ್ಷಗಳು ಕೇಸರೆರಾಚೇಟದಲ್ಲಿ ಜನ ಮನರಂಜನೆ ಪಡೆಯುತ್ತಿದ್ದಾರೆ.

ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು

Exit mobile version