Saturday, August 30, 2025
HomeUncategorizedನಾನು ಕಾಂಗ್ರೆಸ್​ ಕಾರ್ಯಕರ್ತ: ಮೊಟ್ಟೆ ಎಸೆದ ವ್ಯಕ್ತಿ ಸಂಪತ್​ ಸ್ಪೋಟಕ ಮಾತು

ನಾನು ಕಾಂಗ್ರೆಸ್​ ಕಾರ್ಯಕರ್ತ: ಮೊಟ್ಟೆ ಎಸೆದ ವ್ಯಕ್ತಿ ಸಂಪತ್​ ಸ್ಪೋಟಕ ಮಾತು

ಕೊಡಗು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣ ಮೊಟ್ಟೆ ಎಸೆದ ಸೋಮವಾಪೇಟೆ ಸಂಪತ್ ಕುಮಾರ್​ ಮಾತನಾಡಿ, ನಾನು ಈ ಹಿಂದೆ ಜೆಡಿಎಸ್ ಕಾರ್ಯಕರ್ತನಾಗಿದ್ದೆ, ಈಗ ಕಾಂಗ್ರೆಸ್​ ಕಾರ್ಯಕರ್ತನಾಗಿದ್ದೇನೆ ಎಂದಿದ್ದಾರೆ.

ಮಾಜಿ ಸಚಿವರು ಜೀವಿಜಯ ಅವರ ಸಮ್ಮುಖದಲ್ಲಿ ಬಂದಾಗ ಕಾಂಗ್ರೆಸ್ ಗೆ ಬಂದಿದ್ದೇನೆ. ಈ ಹಿಂದೆ ಸಿದ್ದರಾಮಯ್ಯ ಕೊಡಗಿನವರು ದನದ ಮಾಂಸ ಭಕ್ಷಣೆ ಮಾಡುತ್ತಾರೆಂದು ಹೇಳಿದ್ದರು. ಟಿಪ್ಪು ವಿಷಯದಲ್ಲಿ ಕೊಡಗಿನ ಜನರ ಭಾವನೆಗೆ ದಕ್ಕೆಯಾಗಿದೆ. ಇದು ನನಗೆ ಇಷ್ಟವಾಗಿಲ್ಲ ಎಂದು ಸಂಪತ್ ಹೇಳಿದ್ದಾನೆ.

ಇದರ ಪರಿಣಾಮವಾಗಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದೇನೆ. ಅಪ್ಪಚ್ಚು ರಂಜನ್ ಅವರೊಂದಿಗೆ ಫೋಟೊ ವೈರಲ್ ಕುರಿತು ಮಾತನಾಡಿ, ಯಾವುದೋ ಹಿಂದೂ ಸಂಘಟನೆಯ ಕಾರ್ಯಕ್ರಮದಲ್ಲಿ ಫೋಟೊ ತೆಗೆಸಿಕೊಂಡಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಕುಶಾಲನಗರದಲ್ಲಿ ನ್ಯಾಯಾಲಯ ಆವರಣದಲ್ಲಿ ನ್ಯಾಯಾಲಯಕ್ಕೆ ಶರಣಾಗಲು ಬಂದಾಗ ಸಂಪತ್​ ನನ್ನ ಪೊಲೀಸರು ಬಂಧನ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments