Site icon PowerTV

ನಾನು ರಕ್ಷಾ ರಾಮಯ್ಯ ಒಂದೇ : ಮೊಹಮ್ಮದ್‌ ನಲಪಾಡ್

ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ ಅಭ್ಯರ್ಥಿಯಾದರೆ ಸೈನಿಕನಾಗಲು ಸಿದ್ಧ ಎಂದು ಚಿಕ್ಕಬಳ್ಳಾಪುರದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್‌ ನಲಪಾಡ್​ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಕ್ಷಾ ರಾಮಯ್ಯ ಒಂದೇ. ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರು ಶಾಲಾ ಸಮಯದಿಂದಲೇ ಒಳ್ಳೆ ಸ್ನೇಹಿತರು. ನಮ್ಮಿಬ್ಬರ ಮಧ್ಯೆ ಬಿರುಕು ಮೂಡಿಸಲು ಯಾರೇ ಯತ್ನಿಸಿದರೂ ಫಲ ನೀಡದು ಎಂದರು.

ಇನ್ನು, ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ವಿರುದ್ಧ ಸೆಣಸಲು ಸೈ ಎಂದ ನಲಪಾಡ್. ನಾನು ರಕ್ಷಾ ಜಂಟಿಯಾಗಿ ಸೆಣಸಲು ಸಿದ್ಧ ಅಂದ ಮೊಹಮ್ಮದ್‌ ಯುವ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಹೇಳಿದರು. ನಳಪಾಡ್ ಹೇಳಿಕೆಗೆ ಕಾರ್ಯಕರ್ತರು ಸಿಳ್ಳೆ ಹೊಡೆದು ಕೇಕೆ ಹಾಕಿದ್ದಾರೆ.

Exit mobile version