Site icon PowerTV

13 Kg ಕೇಕ್ ಕತ್ತರಿಸಿ ‘ಹೋರಿ’ಯ ಜನ್ಮದಿನ ಆಚರಿಸಿದ ಮಾಲಿಕ.!

ಹಾವೇರಿ: ಜಿಲ್ಲೆಯ ಶಿವಬಸವೇಶ್ವರ ನಗರದಲ್ಲಿರುವ ಮಹೇಶ್ ಸತ್ಯಪ್ಪನವರ್ ಅವರ ನೆಚ್ಚಿನ ಎತ್ತು ನಕ್ಷತ್ರಕ್ಕೆ ಎಂಟು ವರ್ಷ ತುಂಬಿದ ಹಿನ್ನೆಲೆ ಹೋರಿಯ 8ನೇ ವರ್ಷದ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಹೋರಿಗೆ ಕಾಲ್ಗೆಜ್ಜೆ, ಗಂಟೆ, ಬಲೂನ್‌, ರಿಬ್ಬನ್‌, ಜೋಲಾದಿಂದ ಅಲಂಕಾರ ಮಾಡಲಾಗಿತ್ತು. ನಕ್ಷತ್ರ ಹೆಸರಿನ ಹೋರಿ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದು, ಅಭಿಮಾನಿಗಳ ದಂಡೆ ಹೊಂದಿದೆ. ಬರ್ತಡೆ ಆಚರಣೆ ವೇಳೆ ಭಾಗವಹಿಸಿದ್ದ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಸಿಂದಗಿ ಮಠದಲ್ಲಿ ನಕ್ಷತ್ರ ಹೋರಿಗೆ ವಿಶೇಷ ಪೂಜೆ ನೇರವೇರಿಸಲಾಯಿತು. ಹೋರಿ ಹೆಸರಿನಲ್ಲಿ ಅಭಿಷೇಕ ಮತ್ತು ಪೂಜಾ ಕೈಂಕರ್ಯಗಳನ್ನ ನೆರವೇರಿಸಿದರು. ಬಳಿಕ ಮನೆಯಲ್ಲಿ ಅಭಿಮಾನಿಗಳು ಮತ್ತು ಮಹೇಶ್‌ ನೆಚ್ಚಿನ ಹೋರಿಗೆ ಸುಮಾರು 13 ಕೆ.ಜಿ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು.

ಹಳ್ಳೀಕಾರ್ ತಳಿಯ ಹೋರಿಯನ್ನ ಮಹೇಶ್ ಹಾವೇರಿಯಲ್ಲಿ ಎರಡು ವರ್ಷಗಳ ಹಿಂದೆ 96 ಸಾವಿರ ರೂಪಾಯಿ ನೀಡಿ ಖರೀದಿಸಿದ್ದರು. ಅದಾದ ಬಳಿಕ ನಕ್ಷತ್ರ ಹೋರಿ ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಸ್ಪರ್ಧೆಯಲ್ಲಿ ಭಾಗವಹಿಸಿ ಛಾಪು ಮೂಡಿಸಿದೆ.

Exit mobile version