Site icon PowerTV

ಡ್ರಾಪ್ ಕೇಳೊ ನೆಪದಲ್ಲಿ ಯೋಧನನ್ನ ಗುಂಡಿಕ್ಕಿ ಕೊಂದ ಅಪರಿಚಿತ ವ್ಯಕ್ತಿಗಳು.!

ಪಾಟ್ನಾ: ರಜೆ ಮೇಲೆ ಊರಿಗೆ ಬಂದಿದ್ದ ಯೋಧನ ಮೇಲೆ ಇಬ್ಬರು ಅಪರಿಚಿತರು ವ್ಯಕ್ತಿಗಳು ಯೋಧನ ಮೇಲೆ ಗುಂಡು ಒಡೆದು ಹತ್ಯೆ ಮಾಡಿದ ಘಟನೆ ಇಂದು ನಡೆದಿದೆ.

ಪಟ್ಲಿಪುತ್ರ ರೈಲು ನಿಲ್ದಾಣಕ್ಕೆ ಯೋಧ ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಚಿತರು ವಿಳಾಸ ಹಾಗೂ ಡ್ರಾಪ್ ಕೇಳೊ ನೆಪದಲ್ಲಿ ಕಾರನ್ನು ನಿಲ್ಲಿಸಿ ಇದ್ದಕ್ಕಿದ್ದಾಗೆ ಯೋಧನ ತಲೆಯ ಭಾಗಕ್ಕೆ ಗುಂಡು ಒಡೆದು ಹತ್ಯೆ ಮಾಡಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಯೋಧನಾಗಿ ನಿಯೋಜನೆಗೊಂಡಿದ್ದ, ಇತ್ತೀಚಿಗೆ ತಮ್ಮ ಸ್ವಗ್ರಾಮಕ್ಕೆ ಬಂದಿದ್ದರು.

ಈ ವೇಳೆ ಯೋಧನ ಸಹೋದರನ ಮೇಲೂ ಗುಂಡು ಹಾರಿಸಲು ಈ ಅಪರಿಚಿತ ವ್ಯಕ್ತಿಗಳು ಪ್ರಯತ್ನಿಸಿದರು. ಆದರೆ, ಅವರು ಈ ಆರೋಪಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪಾಟ್ನಾ ಎಸ್‌ಎಸ್‌ಪಿ ಮಾನವಜೀತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

Exit mobile version