Site icon PowerTV

ಪುನೀತ್ ಸಮಾಧಿ ಅಭಿವೃದ್ಧಿ ಮುಂದಾದ ಸರ್ಕಾರ

ಬೆಂಗಳೂರು : ಪುನೀತ್ ಸಮಾಧಿ ಅಭಿವೃದ್ಧಿ ಮುಂದಾದ ಸರ್ಕಾರ ಸುಸಜ್ಜಿತ ಮ್ಯೂಸಿಯಂ ಮಾಡಲು ಪ್ಲ್ಯಾನ್ ಮಾಡಿದೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಪುನೀತ್ ರಾಜ್ ಕುಮಾರ್ ‌ಕುಟುಂಬದಿಂದ ಸಿಎಂ ಭೇಟಿ ನೀಡಿದ್ದು, ರಾಜ್ ಸ್ಮಾರಕದ 2.5 ಎಕರೆ ಜಾಗದಲ್ಲಿ ಅಭಿವೃದ್ಧಿ ‌ಕಾರ್ಯ ಹಾಗೂ ಸುಸಜ್ಜಿತ ಮ್ಯೂಸಿಯಂ ಮಾಡಲು ಪ್ಲ್ಯಾನ್ ಮಾಡಿದೆ.

ಇನ್ನು, ಡಾ. ರಾಜ್ ಕುಮಾರ್ ದಿನನಿತ್ಯ ಬಳಸಿದ ವಸ್ತುಗಳು, ಬಟ್ಟೆಗಳು ಪುನೀತ್ ‌ರಾಜ್ ಕುಮಾರ್ ಅವರ ಪೇವರೇಟ್ ವಸ್ತುಗಳು, ಅಣ್ಣಾವ್ರು ಪಡೆದ ಪ್ರಶಸ್ತಿ, ಅಪ್ಪು ಪಡೆದ ಪ್ರಶಸ್ತಿ ಇರಿಸಲು ಚಿಂತನೆ ಮಾಡಿದ್ದು, ಚಲನಚಿತ್ರಕ್ಕೆ ಸಂಬಂಧಿಸಿದ ಲೈಬ್ರರಿ ‌ಮಾಡಲು ಕುಟುಂಬ ಮನವಿ ಮಾಡಿದೆ.

ಅದಲ್ಲದೇ, ಸಿನಿಮಾದ ತಜ್ಞರು ಬರೆದಿರೋ ಕೆಲ ಪುಸ್ತಕವು ಫಾರಿನ್ನಲ್ಲಿ‌ ಮಾತ್ರ ಸಿಗುತ್ತದೆ. ಇದೆಲ್ಲ ನಮ್ಮಲ್ಲೇ ಸಿಗುವಂತೆ ಮಾಡಲು ರಾಜ್ ಸ್ಮಾರಕದಲ್ಲೆ ಲೈಬ್ರರಿ, ಡಿಜಿಟಲ್ ಲೈಬ್ರರಿಯೂ ಒಳಗೊಂಡಂತೆ ಲೈಬ್ರರಿ ‌ಮಾಡೋಣ ಅಂದಿರೋ ಸಿಎಂ. ಸದ್ಯ ಅಪ್ಪು ಸಮಾಧಿ ಬಳಿ ಶಾಮಿಯಾನ ಹಾಕಾಗಿದೆ. ಅದನ್ನ ತೆರವುಗೊಳಿಸಿ ಅರ್ಥಪೂರ್ಣ ಸಮಾಧಿ ರಚನೆ‌ ಮಾಡಲು ಚಿಂತನೆ ಮಾಡಿದೆ.

ಸ್ವಾತಂತ್ರ್ಯ ದಿನದಂದು‌ ಬರೋಬ್ಬರಿ 1.20 ಲಕ್ಷ ಜನ ಪುನೀತ್ ಸ್ಮಾರಕಕ್ಕೆ ಬಂದಿದ್ರು, ಹೀಗಾಗಿ ಬಂದವರಿಗೆ ಅಗತ್ಯವಾದ ಮಾಹಿತಿ ನೀಡಲು ಸಮಗ್ರ ಅಭಿವೃದ್ಧಿ ಮಾಡಲಾಗಿದ್ದು, ಪ್ರವಾಸಿಗರನ್ನು ಸೆಳೆಯಲು ಇನ್ನಷ್ಟು ಉತ್ತಮ ಪ್ಯ್ಲಾನ್ ಮಾಡುತ್ತೇವೆ ಎಂದು ರಾಜ್ ಕುಟುಂಬಕ್ಕೆ ಸಿಎಂ ಮಾತು ಕೊಟ್ಟಿದ್ದಾರೆ. ರಾಜ್ ಕುಟುಂಬದ ಜೊತೆ PWD ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಶೀಘ್ರವಾಗಿ ಯೋಜನಾ ವರದಿ ತಯಾರಿಸುವಂತೆ ಸಿಎಂ ಸೂಚನೆ ನೀಡಿದ್ದು, ನವೆಂಬರ್ 1 ಕ್ಕೆ ಪುನೀತ್ ಸ್ಮಾರಕದ ಗುದ್ದಲಿ ಪೂಜೆ ಸಾಧ್ಯತೆ ಇದೆ.

Exit mobile version