Site icon PowerTV

ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ

ಮಂಡ್ಯ : ತಾಲೂಕಿನ ಮೊಡಚಾಕನಹಳ್ಳಿ ಗ್ರಾಮದ ಚೇತನ್ ಎಂಬುವರ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿವೆ.

ಕಬ್ಬು ಕಡಿಯುವ ವೇಳೆ ಕಾರ್ಮಿಕರ ಕಣ್ಣಿಗೆ ಚಿರತೆ ಮರಿಗಳು ಬಿದ್ದವು, ಕೂಡಲೇ ಚಿರತೆ ಮರಿಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು . ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಚಿರತೆ ಮರಿಗಳನ್ನ ವಶಕ್ಕೆ ಪಡೆದರು. ಇನ್ನೂ ಚಿರತೆ ಮರಿಗಳ ತಾಯಿ ಕೂಡ ಗ್ರಾಮದಲ್ಲೇ ಇರಬಹುದೆಂಬ ಅನುಮಾನವಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಕೂಡಲೇ ತಾಯಿ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

Exit mobile version