Site icon PowerTV

ರಾಜ್ಯ ಸರ್ಕಾರ ಜಾರಿ ಮಾಡ್ತಿದೆ ಹೊಸ ಸ್ಕ್ರ್ಯಾಪಿಂಗ್ ನೀತಿ..!

ಬೆಂಗಳೂರು : ನಿಮ್ಮ ವಾಹನ 15ರಿಂದ 20 ವರ್ಷಕ್ಕಿಂತ ಹಳೆಯದಾಗಿದ್ದರೆ ರಾಜ್ಯ ಸರ್ಕಾರ ಹೊಸ ಸ್ಕ್ರ್ಯಾಪಿಂಗ್ ನೀತಿ ಜಾರಿ ಮಾಡುತ್ತಿದೆ.

ನಿಮ್ಮ ವಾಹನ 15ರಿಂದ 20 ವರ್ಷಕ್ಕಿಂತ ಹಳೆಯದಾ..? ಹಾಗಾದರೆ, ನಿಮ್ಮ ವಾಹನಕ್ಕೆ ಇದೇ ಭಾರಿ ಕಂಟಕ ಎದುರಾಗಲಿದೆ. ಸ್ಕ್ರ್ಯಾಪ್ ಪಾಲಿಸಿಗೆ ರಾಜ್ಯ ಸರ್ಕಾರ ರೆಡಿಯಾಗ್ತಿದೆ. ಎಲೆಕ್ಟ್ರಿಕ್ ವಾಹನಕ್ಕೆ ಉತ್ತೇಜಿಸಲು ಸ್ಕ್ರ್ಯಾಪಿಂಗ್ ನೀತಿ ಜಾರಿ ಮಾಡುತ್ತಿದ್ದು, ಮಿತಿಮೀರಿದ ವಾಹನಗಳ ಕಡಿವಾಣಕ್ಕೆ ಗುಜರಿ‌ ನೀತಿಯನ್ನು ಜಾರಿ ಮಾಡಿದೆ.

ಇನ್ನು, ಜಾರಿ ಮಾಡಲಿರೋ ಸ್ಕ್ರ್ಯಾಪ್ ಪಾಲಿಸಿ ಹೇಗಿರಲಿದೆ..? ಖಾಸಗಿ ವಾಹನಗಳಿಗೆ 20 ವರ್ಷ, ವಾಣಿಜ್ಯ ವಾಹನಗಳಿಗೆ 15 ವರ್ಷ ಮಿತಿ, 15 ಹಾಗೂ 20 ವರ್ಷ ಮೇಲ್ಪಟ್ಟ ವಾಹನಗಳು ರೋಡಿಗೆ ಬರುವಂತಿಲ್ಲ. ಹಳೆ ವಾಹನ ಗುಜರಿಗೆ ಹಾಕಿ ಹೊಸ ವಾಹನ‌ ಖರೀದಿಗೆ ರಿಯಾಯಿತಿ ನೀಡಲಾಗಿದೆ. ಬೆಂಗಳೂರಲ್ಲಿ 1 ಕೋಟಿ 10 ಲಕ್ಷ, ರಾಜ್ಯದಲ್ಲಿ 3 ಕೋಟಿ ವಾಹನಗಳಿವೆ. ಹಾಗೆನೇ ರಾಜ್ಯದಲ್ಲಿ ಒಟ್ಟು 60 ಲಕ್ಷ ಗುಜರಿ ವಾಹನಗಳ ಮಾಲೀಕರಿಗೆ ಆಪತ್ತು ಒದಗಲಿದೆ.

Exit mobile version