Site icon PowerTV

ಸನ್​ರೈಸರ್ಸ್​ ಹೈದ್ರಾಬಾದ್ ಒಡೆತನದಲ್ಲಿ ಹೊಸ ತಂಡ ಬಿಡುಗಡೆ.!

ನವದೆಹಲಿ: ಐಪಿಎಲ್​ನ ಪ್ರತಿಷ್ಠಿತ ತಂಡಗಳಲ್ಲಿ ಒಂದಾದ ಸನ್​ರೈಸರ್ಸ್​ ಹೈದ್ರಾಬಾದ್ (ಎಸ್​ಆರ್​ಎಚ್​) ತಂಡ ತನ್ನ ಒಡೆತನದಲ್ಲಿ ಮೊತ್ತೊಂದು ಹೊಸ ತಂಡವನ್ನು ಬಿಡುಗಡೆ ಮಾಡಿದೆ.

ಹೌದು.. ಸೌತ್ ಆಫ್ರಿಕಾದಲ್ಲಿ ನಡೆಯುವ ಕ್ರಿಕೆಟ್​ ಸೌತ್​ ಆಫ್ರಿಕಾ ಲೀಗ್ (ಸಿಎಸ್​ಯ)​ ಟಿ-20 ಲೀಗ್ ನಲ್ಲಿ ಹೈದ್ರಾಬಾದ್​ ಫ್ರಾಂಚೈಸ್​ನ “ಸನ್‌ರೈಸರ್ಸ್ ಈಸ್ಟರ್ನ್ ಕೇಪ್’ ಎಂದು ಟ್ವೀಟರ್​ ಮೂಲಕ ಬಹಿರಂಗಬಡಿಸಿದೆ.

ಆರೆಂಜ್ ಆರ್ಮಿ, ಸನ್‌ರೈಸರ್ಸ್ ಈಸ್ಟರ್ನ್ ಕೇಪ್‌ಗೆ ಸುಸ್ವಾಗತ ಎಂದು ಐಪಿಎಲ್ ಫ್ರಾಂಚೈಸಿಯಾದ ಸನ್‌ರೈಸರ್ಸ್ ಹೈದರಾಬಾದ್ ತಂಡ ಟ್ವೀಟ್ ಮಾಡಿದೆ.

ಹೀಗಾಗಲೇ ಮುಂಬೈ ಇಂಡಿಯನ್ಸ್ ಮಾಲೀಕರ ಒಡೆತನದ ಎಂಐ ಕೇಪ್ ಟೌನ್, ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರ ಒಡೆತನದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ , ರಾಜಸ್ಥಾನ್ ರಾಯಲ್ಸ್ ಮಾಲೀಕರ ಒಡೆತನದ ಪಾರ್ಲ್ ರಾಯಲ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಮಾಲೀಕರ ಒಡೆತನದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡ ಇದೆ.

Read more at: https://kannada.mykhel.com/cricket/csa-t20-league-sunrisers-hyderabad-announced-new-franchise/articlecontent-pf34913-026769.html

Exit mobile version