Site icon PowerTV

ಮುಸ್ಲಿಂ ಏರಿಯಾ ಏನು ಪಾಕಿಸ್ತಾನಕ್ಕೆ ಸೇರಿದ್ಯಾ..? : ಆರ್.ಅಶೋಕ್

ಬೆಂಗಳೂರು : ವೀರ ಸಾವರ್ಕರ್ ಫೋಟೊವನ್ನು ಮುಸ್ಲಿಂರ ಏರಿಯಾದಲ್ಲಿ ಹಾಕಿದ್ಯಾಕೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕನ್ಪೂಷನ್‌ನಲ್ಲಿದ್ದಾರೆ. ಮುಸ್ಲಿಂ ಏರಿಯಾ ಏನು ಪಾಕಿಸ್ತಾನಕ್ಕೆ ಸೇರಿದ್ಯಾ ? ಭಾರತಕ್ಕೆ ಸೇರಿದೆ. ಮುಸ್ಲಿಂನವರು ಇರೋ ಮಾತ್ರಕ್ಕೆ ಅದನ್ನು ಪಾಕಿಸ್ತಾನ ಅಂದುಕೊಂಡಿದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಸಾವರ್ಕರ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರು. ಎರಡು ಬಾರಿ ಕರಿನೀರಿನ ಶಿಕ್ಷೆಗೆ ಒಳಗಾದವರು. ಅಂಡಮಾನ್ ಜೈಲಿನಲ್ಲಿದ್ದವರು ಯಾರು ಬದುಕಿ ಬಂದಿಲ್ಲ. ಒಂದು ಖಾಯಿಲೆಯಿಂದ ಆತ್ಮಹತ್ಯೆ ಮಾಡಿಕೊಳ್ತಾರೆ. ಅಂತಹ ಶಿಕ್ಷೆಯನ್ನು ಸಾವರ್ಕರ್ ಯಾಕೆ ನೀಡಬೇಕಿತ್ತು. ಇವರ ಲೀಡರ್‌ಗಳಿಗೆ ಅಂತ ಶಿಕ್ಷೆ ಯಾಕೆ ಕೊಟ್ಟಿಲ್ಲ ಎಂದರು.

ಅದಲ್ಲದೇ, ಬ್ರಿಟಿಷರ ಜೊತೆ ಹೋರಾಡಿದ ಸಾವರ್ಕರ್ ಫೋಟೊ ಹಾಕೋಕೆ ಇವರನ್ನ ಯಾಕೆ ಕೇಳಬೇಕು. ಯಾವ ಯಾವ ಧರ್ಮದವರು ಇದ್ದಾರೆ ಅಂತ ಇವ್ರನ್ನ ಕೇಳಿ ಹಾಕಬೇಕಾ. ಯಾವ ಧರ್ಮ,ಜಾತಿ ಇದ್ದಾರೆ ಅಂತ ನೋಡಿ ಫೊಟೊ ಹಾಕೋಕೆ ಸಂವಿಧಾನದ ಅಡಿ ನಿಯಮ ಇದ್ಯಾ ಎಂದು ಹೇಳಿದರು.

Exit mobile version