Site icon PowerTV

ಶಿವಮೊಗ್ಗದಲ್ಲಿ ಮತ್ತೆ ಹೊತ್ತಿ ಉರಿದ ಧರ್ಮದ ಕಿಚ್ಚು

ಶಿವಮೊಗ್ಗ: ಟಿಪ್ಪು- ಸಾವರ್ಕರ್ ಭಾವಚಿತ್ರ ವಿವಾದದಲ್ಲಿ ಬಜರಂಗದಳ ಮತ್ತು ಮುಸ್ಲಿಂ ಯುವಕರ ಕಾದಾಟ ಮುಂದುವರೆದಿದ್ದು, ಶಿವಮೊಗ್ಗ ನಗರ, ಭದ್ರಾವತಿಯಲ್ಲಿ ಆಗಸ್ಟ್‌ 18ರವರೆಗೆ 144 ಸೆಕ್ಷನ್‌ ಜಾರಿ ಮಾಡಿದ್ದಾರೆ.

ನಗರದಲ್ಲಿ, ಫೋಟೋ ಫೈಟ್‌ ಮಧ್ಯೆ ಉಪ್ಪಾರಕೇರಿಯ ಪ್ರೇಮ್‌ಸಿಂಗ್‌ಗೆ ಚಾಕು ಇರಿತವಾಗಿ ಮೊದಲೇ ಉದ್ವಿಗ್ನಗೊಂಡಿದ್ದ ಶಿವಮೊಗ್ಗದಲ್ಲಿ ಮತ್ತಷ್ಟು ಬೂದಿ ಮುಚ್ಚಿದ ಕೆಂಡದಂತಾಗಿದೆ. ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂದು ಶಿವಮೊಗ್ಗ ನಗರ, ಭದ್ರಾವತಿಯಲ್ಲಿ ಆಗಸ್ಟ್‌ 18ರವರೆಗೆ 144 ಸೆಕ್ಷನ್‌ ಜಾರಿ ಮಾಡಿದ್ದಾರೆ.

ಇನ್ನು , ಶಿವಮೊಗ್ಗ ನಗರದ ದೊಡ್ಡಪೇಟೆ, ತುಂಗಾನಗರ, ಕೋಟೆ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ರಾತ್ರಿ ವೇಳೆ ಜನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧಿಸಲಾಗಿದೆ. ಭದ್ರಾವತಿಯಲ್ಲೂ ನಿಷೇಧಾಜ್ಞೆ ಜಾರಿ ಮಾಡಿದ ಡಿಸಿ. ಭದ್ರಾವತಿ ಪಟ್ಟಣದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

Exit mobile version