Site icon PowerTV

ಸಚಿವ ಮಾಧುಸ್ವಾಮಿ ಆಡಿಯೋ ಲೀಕ್, ಸಭೆ ಕರೆದ ಸಹಕಾರ ಸಚಿವ ಸೋಮಶೇಖರ್​

ಬೆಂಗಳೂರು: ಸಚಿವ ಜೆ.ಸಿ ಮಾಧುಸ್ವಾಮಿ ಆಡಿಯೋ ಲೀಕ್ ವಿಚಾರ ಆಡಿಯೋದಲ್ಲಿ ಸಹಕಾರ ಇಲಾಖೆಯ ಮೇಲೆ ಅರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅಧಿಕಾರಿಗಳ ಸಭೆ ಕರೆದಿದ್ದಾರೆ.

ಸಭೆಯಲ್ಲಿ ಸಹಕಾರ ಇಲಾಖೆಯ ರಿಜಿಸ್ಟರ್, ಡಿಸಿಸಿ ಬ್ಯಾಂಕ್ ಎಂಡಿ ಹಾಗೂ ಎಲ್ಲಾ ಮ್ಯಾನೇಜರ್ ಹಾಗೂ ಅಧಿಕಾರಿಗಳು ಭಾಗಿ. ಸಭೆಯಲ್ಲಿ ಅಡಿಯೋ ಲೀಕ್ ಪ್ರಸ್ತಾಪವಾಗಿರೋ ಸಚಿವರು ಚರ್ಚೆ ಮಾಡಲಿದ್ದಾರೆ.

ತುಮಕೂರು ಡಿಸಿಸಿ ಬ್ಯಾಂಕ್ ಅಧಿಕಾರಿಯಿಂದ ವರದಿ ನೀಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಸಿಎಂ ಹಾಗೂ ವರಿಷ್ಠರಿಂದ ಸೂಚನೆ ಹಿನ್ನಲೆ. ಬಹಿರಂಗ ಹೇಳಿಕೆ ಕೊಡದಂತೆ ಸೂಚನೆ, ಹೀಗಾಗಿಯೇ ಸಹಕಾರ ಸಚಿವ ಸಭೆ ಕರೆದಿದ್ದಾರೆ.

Exit mobile version