Site icon PowerTV

ಭಗವಂತ ಆರ್ಶಿವಾದ ಕೊಟ್ರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ : ಶ್ರೀರಾಮುಲು

ಬಳ್ಳಾರಿ : ಭಗವಂತ ಆರ್ಶಿವಾದ ಕೊಟ್ರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಕುರುಬರ ಸಂಘದ ಹಾಸ್ಟೇಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದ ಜಾತಿಗಳು ಒಂದಾಬೇಕು ಅನ್ನೋದು ಸಿದ್ದರಾಮಯ್ಯ, ಶ್ರೀರಾಮುಲು ಇಬ್ಬರ ಪ್ರಯತ್ನ. ಹಿಂದುಳಿದ ಜಾತಿಗಳಲ್ಲಿ ಒಡಕು ಆಗಬಾರದು. ಸಿದ್ದರಾಮಯ್ಯ ಶ್ರೀರಾಮುಲು ಎರಡು ಕಡೆ ಚುನಾವಣೆಯಲ್ಲಿ ಸ್ಪರ್ಧಿಸಿದ್ವಿ. ಎರಡು ಕಡೆಯಲ್ಲೂ ಒಂದೊಂದು ಕಡೆ ಸೋತಿವಿ ಮತ್ತೊಂದು ಕಡೆ ಗೆದ್ದೀವಿ. ಬಾದಾಮಿಯಲ್ಲಿ ಸಿದ್ದರಾಮಯ್ಯ ಹೇಗೆ ಗೆದ್ದರು ಅಂತಾ ಅವರನ್ನ ಒಮ್ಮೆ ಕೇಳಿ. ಅವರು ಚುನಾವಣೆ ಹೇಗೆ ಗೆದ್ದಿದ್ದಾರೆ ಅನ್ನೋದನ್ನ ಹೇಳುತ್ತಾರೆ. ಯಾಕೆ ಅಂದ್ರೆ ನಮ್ಮಿಬ್ಬರ ದೋಸ್ತಿ ಆ ತರಹ ಇದೆ ಎಂದರು.

ಇನ್ನು, ನೋಡೋಕೆ ಮಾತ್ರ ಆಗೆಯೇ ಕಾಣುತ್ತೆ ಆದರೆ ನಾವಿಬ್ಬರು ದೋಸ್ತಿಗಳು. ಇಬ್ಬರು ರಾಜಕಾರಣದಲ್ಲಿ ಇರುವ ತರಹ ನಾವು ಮಾಡಿಕೊಳ್ಳುತ್ತೇವೆ. ಭಗವಂತ ಆರ್ಶಿವಾದ ಕೊಟ್ರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ. ಬಿಜೆಪಿಯಿಂದ ಅವಕಾಶ ಸಿಕ್ರೆ ರಾಮುಲು ಆಗಲಿ. ಯುವಕರು ಯಾರೂ ಕೂಡ ಶ್ರೀರಾಮುಲು, ಸಿದ್ದರಾಮಯ್ಯ ಕುರುಬರ ವಿರುದ್ದ ಅಂತಾ ತಿಳಿದುಕೊಳ್ಳಬೇಡಿ. ಅವಕಾಶ ಬಂದ್ರೆ ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋ ಆಸೆ ಪಡುವ ವ್ಯಕ್ತಿಗಳಲ್ಲಿ ನಾನು ಒಬ್ಬ. ರಾಮುಲು ಮುಖ್ಯಮಂತ್ರಿ ಆಗಬೇಕು ಅನ್ನೋದನ್ನ ಸಿದ್ದರಾಮಯ್ಯನವರು ಒಪ್ಪುತ್ತಾರೆ. ಹಿಂದುಳಿದ ವಿಚಾರಗಳು ಬಂದಾಗ ನಾವು ಸಿದ್ದರಾಮಯ್ಯನವರು ಒಂದೇ ನಾವು ಸಿದ್ದರಾಮಯ್ಯನವರು ಒಂದೇ ವೇದಿಕೆಯಲ್ಲಿ ಬರುವವರಲ್ಲಿ ನಾನು ಕೂಡ ಒಬ್ಬ ಎಂದು ಹೇಳಿದರು.

Exit mobile version