Site icon PowerTV

ಬಿಜೆಪಿ ಅವರದ್ದು ನಕಲಿ ದೇಶಭಕ್ತಿ : ಸಿದ್ದರಾಮಯ್ಯ

ಬೆಂಗಳೂರು : ಎಸ್ ಡಿಪಿಐ, PFI ಅವ್ರು ಸಾಮರಸ್ಯ ಹಾಳು ಮಾಡ್ತಿದಾರೆ ಅಂದ್ರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಕಾಮಾಲೆ ರೋಗ ಬಂದಿದೆ. ಸುಳ್ಳನ್ನ ಹೇಳುವುದು ಅದನ್ನು ಕಾಂಗ್ರೆಸ್ ಮೇಲೆ‌ ಹಾಕುವುದು. ಇದನ್ನ ವ್ಯವಸ್ಥಿತವಾಗಿ ಮಾಡ್ತಿದಾರೆ. ಸಾವರ್ಕರ್ ಫೋಟೋ ಹಾಕಿರೋದು ಮುಸಲ್ಮಾನ ಏರಿಯಾದಲ್ಲಿ. ಮುಸ್ಲಿಂ ಏರಿಯಾದಲ್ಲಿ ಯಾಕೆ ಹಾಕೋಕೆ ಹೋಗಬೇಕಿತ್ತು ಸಾವರ್ಕರ್ ಫೋಟೋ ಹಾಕೋಕೆ ಹೋದವರು ಟಿಪ್ಪು ಫೋಟೋ ಹಾಕೋಕೆ ಬಿಡಬೇಕಿತ್ತು ಎಂದರು.

ಇನ್ನು, ಎಸ್ ಡಿಪಿಐ, PFI ಅವ್ರು ಸಾಮರಸ್ಯ ಹಾಳು ಮಾಡ್ತಿದಾರೆ ಅಂದ್ರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಅವರು ಸಾಮರಸ್ಯ, ಸ್ವಾಸ್ಥ್ಯ ಹಾಳು ಮಾಡ್ತಿದ್ದಾರೆ ಅಂತ ದಾಖಲೆ ಇದ್ರೆ ಕ್ರಮ ಕೈಗೊಳ್ಳಿ. ಮಗುವನ್ನೂ ಚಿವುಟುವುದು ಇವರೇ ತೊಟ್ಟಿಲ ತೂಗುವುದು ಇವರೇ. ಈ ಕೆಲಸ ಮಾಡೋಕೆ ಹೋಗಬೇಡಿ. ಕ್ರಮ ತೆಗೆದುಕೊಳ್ಳೋದಕ್ಕೆ ಯಾಕೆ ಮುಂದಾಗಲ್ಲ. ಮುಖ್ಯಮಂತ್ರಿ ಕೇವಲ ಪ್ರವೀಣ್ ಮನೆಗೆ ಮಾತ್ರ ಹೋಗ್ತಾರೆ. ಇನ್ನಿಬ್ಬರು ಮುಸ್ಲಿಂರ ಮನೆಗೆ ಯಾಕೆ ಹೋಗಲ್ಲ. ಇವತ್ತಿನ ತನಕ ಹೋಗಿಲ್ಲ, ಪರಿಹಾರ ಕೊಟ್ಟಿಲ್ಲ. ನೆಹರು ಫೋಟೋನೇ ಹಾಕಿಲ್ಲ ಇವ್ರು. ನರೇಂದ್ರ ಮೋದಿ ನೆಹರು ಸ್ಮರಣೆ ಮಾಡ್ತಾರೆ. ಇವರಿಗೆ ಇತಿಹಾಸವೇ ಗೊತ್ತಿಲ್ಲ ಎಂದು ಹೇಳಿದರು.

ಅದಲ್ಲದೇ, ಸಾವರ್ಕರ್ ಮುಚ್ಚಳಿಕೆ ಬರೆದು ಕೊಟ್ಟು ಬಂದ ಮೇಲೆ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರು. ಬಿಜೆಪಿ ಅವ್ರುದ್ದು ನಕಲಿ ದೇಶಭಕ್ತಿ. ಇವ್ರು ಆರ್ ಎಸ್ ಎಸ್ ಕೈಗೊಂಬೆ ಆಗಿರೋರು ಮತ್ತೇನು ಹೇಳ್ತಾರೆ ಎಂದರು.

Exit mobile version