Site icon PowerTV

ಶಿವಮೊಗ್ಗ ಚೂರಿ ಇರಿತ​: ಆರೋಪಿಗಳನ್ನ ವೈದ್ಯಕೀಯ ತಪಾಸಣೆಗೆ ಕರೆದಂತ ಪೊಲೀಸರು.!

ಶಿವಮೊಗ್ಗ: ಶಿವಮೊಗ್ಗ ಒಬ್ಬರಿಗೆ ಚೂರಿ ಇರಿತ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಪೊಲೀಸರು ಕರೆತಂದಿದ್ದಾರೆ.

ನಿನ್ನೆ ಪ್ರೇಮಸಿಂಗ್ ಎಂಬ ಯುವಕನಿಗೆ ಆರೋಪಿಗಳಾದ ನದೀಂ, ಅಬ್ದುಲ್ ರೆಹಮಾನ್, ತನ್ವೀರ್ ಚಾಕು ಇರಿದಿದ್ದರು. ಈಗ ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಆರೋಪಿಗಳನ್ನು ಕರೆತಂದಿದ್ದಾರೆ. ಆರೋಗ್ಯ ತಪಾಸಣೆ ಬಳಿಕ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಲಿದ್ದಾರೆ.

ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಲ್ಲಿ ಆರ್.ಎ.ಎಫ್. ತುಕಡಿಗಳು, 21 ಕೆ.ಎಸ್.ಆರ್.ಪಿ. ತುಕಡಿಗಳು, 20 ಕ್ಕೂ ಹೆಚ್ಚು ಡಿ.ವೈ.ಎಸ್.ಪಿ., ಇಬ್ಬರು ಎಸ್.ಪಿ. ಗಳು ಸೇರಿದಂತೆ ಹೆಚ್ಚುವರಿ ಸಿಬ್ಭಂಧಿಗಳನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಪೊಲೀಸ್ ಜೀಪ್ ಮೈಕ್ ನಲ್ಲಿ ಎಡಿಜಿಪಿ ಅನೌನ್ಸ್​ ಮಾಡಿದ್ದಾರೆ.

ಶಾಂತಿಗೆ ಭಂಗ ಉಂಟು ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರ ಜೊತೆ ಕೈ ಜೋಡಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

Exit mobile version