Site icon PowerTV

ನಾಳೆ ಎಂದಿನಂತೆ ಶಿವಮೊಗ್ಗದ ಶಾಲಾ ಕಾಲೇಜು ಆರಂಭ; ಜಿಲ್ಲಾಧಿಕಾರಿ ಆದೇಶ

ಶಿವಮೊಗ್ಗ: ನಾಳೆ ಶಿವಮೊಗ್ಗದಲ್ಲಿ ಎಂದಿನಂತೆ ಶಾಲಾ ಕಾಲೇಜು ಆರಂಭವಾಗಲಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ನಗರ ಹಾಗೂ ಭದ್ರಾವತಿ ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳು ನಾಳೆ ಓಪನ್ ಇರಲಿವೆ. ಎಂದಿನಂತೆ ಶಾಲೆಯ ಎಲ್ಲಾ ತರಗತಿಗಳು ನಡೆಯಲಿವೆ ಎಂದು ಡಿಸಿ ಹೇಳಿದ್ದಾರೆ.

ಟಿಪ್ಪು-ಸಾವರ್ಕರ್​ ಸಂಘರ್ಷ ಹಿನ್ನಲೆಯಲ್ಲಿ ಯಾವುದೇ ಅಹಿತಕಾರಿ ಘಟನೆ ನಡೆಯಬಾರದೆಂದು ಇಂದು ಶಿವಮೊಗ್ಗ ನಗರ ಹಾಗೂ ಭದ್ರಾವತಿ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಇಂದು ಜಿಲ್ಲಾಧಿಕಾರಿ ಸೆಲ್ವಮಣಿ ಅವರು ರಜೆ ಘೋಷಣೆ ಮಾಡಿದ್ದರು. ಈಗ ಮತ್ತೆ ಹೊಸ ಆದೇಶ ಹೊರಡಿಸಿದ್ದಾರೆ.

Exit mobile version