Site icon PowerTV

ಪ್ರವೀಣ್ ನೆಟ್ಟಾರ್ ಕೇಸ್​; ಆ. 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಆರೋಪಿಗಳು

ಮಂಗಳೂರು : ಜಿಲ್ಲೆಯ ಬೆಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಪ್ರಕರಣ ಆರೋಪಿಗಳಿಗೆ ಆಗಸ್ಟ್ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.

ಬಂಧಿತ ಮೂವರು ಹಂತಕರ ಪೊಲೀಸ್ ‌ಕಸ್ಟಡಿ ಅವಧಿ ಮುಗಿದ ಹಿನ್ನೆಲೆ, ಆರೋಪಿಗಳಾದ ಸುಳ್ಯದ ಶಿಹಾಬುದ್ದೀನ್, ರಿಯಾಝ್ ಅಂಕತಡ್ಕ, ಬಶೀರ್ ಎಲಿಮಲೆಗೆ ಸುಳ್ಯ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದ್ದರು.

ಈಗ ಸುಳ್ಳದ ಕೋರ್ಟ್​ ಆಗಸ್ಟ್ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇನ್ನು ಈ ಕೇಸ್​ನ್ನ ರಾಜ್ಯ ಸರ್ಕಾರ ಎನ್​ಐಎಗೆ ವರ್ಗಾವಣೆ ಮಾಡಿದ ಹಿನ್ನಲೆಯಲ್ಲಿ ಆರೋಪಿಗಳನ್ನು ಎನ್.ಐ.ಎ ಅಧಿಕಾರಿಗಳು ವಶಕ್ಕೆ ಪಡೆಯುವುದಕ್ಕೆ ಸಿದ್ದತೆ ನಡೆಸಿದ್ದಾರೆ. ಕೋರ್ಟ್ ಗೆ ಅರ್ಜಿ‌ ಸಲ್ಲಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

Exit mobile version