Site icon PowerTV

ಕೊಟ್ಟ ಮಾತಿಗೆ ತಪ್ಪಿದ್ದೇನೆ ದಯವಿಟ್ಟು ಕ್ಷಮಿಸಿ : ಸಂಸದ ಪ್ರತಾಪ್ ಸಿಂಹ

ಮೈಸೂರು : ದಯವಿಟ್ಟು ಕ್ಷಮಿಸಿ ಕೊಟ್ಟ ಮಾತಿಗೆ ತಪ್ಪಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಸಿಂಹ ಕ್ಷಮೆ ಕೋರಿದ್ದಾರೆ.

ನಗರದಲ್ಲಿ, ದಶಪಥ ಕಾಮಗಾರಿ ವಿಳಂಬಕ್ಕೆ ಸಂಸದ ಪ್ರತಾಪ್ ಸಿಂಹ ಕ್ಷಮೆ ಕೇಳಿದ್ದಾರೆ. ಜುಲೈನಲ್ಲಿ ಬೆಂಗಳೂರು-ನಿಡಘಟ್ಟ ರಸ್ತೆ ತೆರವು ಮಾಡಿಸುತ್ತೇನೆ ಎಂದಿದ್ದೆ. ಆ.15 ರಂದು ರಾಮನಗರ-ಚನ್ನಪಟ್ಟಣ ಬೈಪಾಸ್ ಓಪನ್ ಮಾಡುತ್ತೇವೆ ಎಂದಿದ್ದೆ. ಮಾತಿಗೆ ತಪ್ಪಿದ್ದೇನೆ, ದಯವಿಟ್ಟು ಕ್ಷಮಿಸಿ ಎಂದರು.

ಇನ್ನು, ಎಲ್ಲ ಪ್ರಯತ್ನಗಳ ನಡುವೆಯೂ ಇನ್ನು, ಹತ್ತು ದಿನಗಳ ಕೆಲಸ ಬಾಕಿಯಿದೆ. ಗುಡ್ಡ ಕಡಿದು ರಸ್ತೆ ನಿರ್ಮಾಣ ನಡೆಯುತ್ತಿದೆ. ಸ್ವಲ್ಪ ಕಾಲಾವಕಾಶ ನೀಡಿ, ಪ್ಲೀಸ್ ಎಂದು ಫೇಸ್ಬುಕ್ ಪೇಜ್​​​ನಲ್ಲಿ ಸಂಸದ ಪ್ರತಾಪ್ ಸಿಂಹ ಕ್ಷಮೆಯಾಚಿಸಿದ.

Exit mobile version