Site icon PowerTV

ಮಾಧುಸ್ವಾಮಿ ಆಡಿಯೋ: ತನಿಖೆಗೆ ಆದೇಶಿಸಿದ ಸಚಿವ ಸೋಮಶೇಖರ್​.!

ಬೆಂಗಳೂರು: ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಆರೋಪ ಮಾಡಿದ ಬ್ಯಾಂಕ್ ಗಳ ಅವ್ಯವಹಾರ ಬಗ್ಗೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ತನಿಖೆಗೆ ಆದೇಶಿಸಿದ್ದಾರೆ.

ಸಚಿವರು ಆರೋಪ ಮಾಡಿದ್ದ ಬ್ಯಾಂಕ್ ಗಳ ಸಹಕಾರ ಸಂಘಗಳ ರಿಜಿಸ್ಟ್ರಾರ್ ಮೂಲಕ ಮಾಧುಸ್ವಾಮಿ ಮಾತನಾಡಿದ ಆಡಿಯೋ ತನಿಖೆ ಆರಂಭವಾಗಿದೆ.

ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರ ಆಡಿಯೋ ಮೊದಲು‌ ಪವರ್​ ಟಿವಿ ಬ್ರೇಕ್ ಮಾಡಿತ್ತು. ಪವರ್ ಟಿವಿ ಜೊತೆ ಮಾತನಾಡಲು ಸಚಿವ ಎಸ್ ಟಿ ಸೋಮಶೇಖರ್ ಹಿಂದೇಟು ಹಾಕಿದ್ದಾರೆ. ಈ ಆಡಿಯೋದಲ್ಲಿ ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಅವರು ಮಾಧುಸ್ವಾಮಿ ಜತೆ ಮಾತನಾಡಿ, ಗ್ರಾಮೀಣ ಸೊಸೈಟಿ ಮಟ್ಟದಲ್ಲಿ ಸಾಲ ನೀಡುವಾಗ ಕಮೀಷನ್ ಪಡೆಯುತ್ತಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎನ್ನುತ್ತಾರೆ. ಆಗ ಮಾಧುಸ್ವಾಮಿ ಸರ್ಕಾರ ನಡೆಯುತ್ತಿಲ್ಲ. ಇನ್ನೆಂಟು ತಿಂಗಳು ಇದೆ ಹೀಗಾಗಿ ಸುಮ್ಮನಿದ್ದೇವೆ. ನಾನು ಸಹ ಕಮೀಷನ್ ನೀಡಿದ್ದೇನೆ ಎಂದಿದ್ದರು.

 

 

Exit mobile version