Site icon PowerTV

ಹುಲಿಹೈದರ್ ಗಲಾಟೆ ಪ್ರಕರಣ : ಗ್ರಾಮವನ್ನೆ ತೊರೆದ ಜನ

ಕೊಪ್ಪಳ : ಹುಲಿಹೈದರ್ ಗಲಾಟೆ ಪ್ರಕರಣದಲ್ಲಿ ಇಬ್ಬರು ಸಾವಾದ ಹಿನ್ನೆಲೆಯಲ್ಲಿ ಹುಲಿಹೈದರ್ ಗ್ರಾಮವನ್ನೆ ಜನ ತೊರೆದಿದ್ದಾರೆ.

ಇನ್ನು, ಗ್ರಾಮ ತೊರೆದ ಜನರನ್ನು ಮರಳಿ ಗ್ರಾಮಕ್ಕೆ ಬನ್ನಿ ಎಂದು ಶಾಸಕ ಬಸವರಾಜ್  ಆಹ್ವಾನಿಸಿದ್ದಾರೆ. ಆರೋಪಿಗಳನ್ನು ಬಿಟ್ಟು ಉಳಿದವರಿಗೆ ತೊಂದರೆ ಆಗದೆ ರೀತಿ ನೋಡಿಕೊಳ್ತೀನಿ. ಎಸ್ಪಿ, ಡಿಸಿ ಜೊತೆ ನಾನು ಚರ್ಚೆ ಮಾಡಿದ್ದಿನಿ. ಭಯ ಪಟ್ಟು ಬೇರೆ ಊರಲ್ಲಿ ಇರೋದು ಬೇಡ. ನಿಮಗೆ ಪೊಲೀಸರು ತೊಂದರೆ‌ ಕೊಡದ ಹಾಗೇ ನೋಡಿಕೊಳ್ತೀನಿ. ನೀವು ಗ್ರಾಮ ಬಿಟ್ಟಿರೋದ್ರಿಂದ ಬೆಳೆ ಹಾನಿ ಜೊತೆಗೆ ಚಿಕ್ಕಮಕ್ಕಳಿಗೆ ಸಮಸ್ಯೆ ಆಗಿದೆ. ಇನ್ಮುಂದೆ ಇಂತಹ ಘಟನೆ ಆಗೋದಿಲ್ಲ ಎಂದು ಭರವಸೆ ನೀಡಿದ್ದಾರೆ.

ಅದಲ್ಲದೇ, ಎಲ್ಲಾ ಧರ್ಮದ ಜನರನ್ನು ಕೂಡಿಸಿ ಸಾಮರಸ್ಯ ಸಭೆ ಮಾಡ್ತೀವಿ ಎಂದ ದಡೇಸೂಗೂರು. ಗಲಾಟೆ ನಡೆದು ಇಬ್ಬರು ಸಾವು ಆದ ಬಳಿಕ ಗ್ರಾಮವನ್ನೆ ಜನರು ತೊರೆದಿದ್ದರು. ಜನರಿಲ್ಲದೇ, ಹುಲಿಹೈದರ್ ಗ್ರಾಮ ಸ್ಮಶಾನ ಮೌನವಾಗಿದೆ.

Exit mobile version