Site icon PowerTV

ಸ್ವಗ್ರಾಮದಲ್ಲಿ ನೆರವೇರಿದ ಗಾಂಧಿವಾದಿ ತಮ್ಮಣ್ಣಪ್ಪ ಬುದ್ನಿ ಅಂತ್ಯಸಂಸ್ಕಾರ.!

ಬೆಂಗಳೂರು: ಬಾಗಲಕೋಟೆಯ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಗಾಂಧಿವಾದಿ ತಮ್ಮಣ್ಣಪ್ಪ ಬುದ್ನಿ ಅವರ ಅಂತ್ಯಸಂಸ್ಕಾರ ಇಂದು ನೆರವೇರಿತು.

ತಮ್ಮಣ್ಣಪ್ಪ ಬುದ್ನಿ ಅವರಿಗೆ 94 ವರ್ಷವಾಗಿತ್ತು. ಮೂಲತಃ ಜಿಲ್ಲೆ ಮುಧೋಳ ತಾಲ್ಲೂಕಿನ ಚಿಚಖಂಡಿ ಗ್ರಾಮದವರಾದ ತಮ್ಮಣ್ಣಪ್ಪ ನಿನ್ನೆ ರಾತ್ರಿ 2 ಗಂಟೆಗೆ ನಿಧನರಾಗಿದ್ದರು.

ತಮ್ಮಣ್ಣಪ್ಪ ಅವರು ವಿನೋಭಾ ಬಾವೆ ಅವರ ಅನುಯಾಯಿ ಆಗಿದ್ದರು. ಇಂದು ಮಧ್ಯಾಹ್ನ ಚಿಚಖಂಡಿಯಲ್ಲಿ  ಅಂತ್ಯಸಂಸ್ಕಾರ ನೆರವೇರಿಸಿಲಾಯಿತು. ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಗೃಹ ಸಚಿವ ಅಗರ ಜ್ಞಾನೇಂದ್ರ ಅವರು ಸಾಮಾಜಿಕ ಜಾಲತಾಣಗಳ ಮೂಲ ಸಂತಾಪ ಸೂಚಿಸಿದ್ದಾರೆ.

ಜೀವನದುದ್ದಕ್ಕೂ ಸಮಾಜದಲ್ಲಿ ಜಾತ್ಯಾತೀತ ಮತ್ತು ಸಮಾನತೆ ಬಯಸಿದ ಚರಕ ಮತ್ತು ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶದಲ್ಲಿ ಹೆಜ್ಜೆ ಇಟ್ಟಿದ್ದರು.

Exit mobile version