Site icon PowerTV

ಆಡಿಯೋ ಸತ್ಯ ಮುಚ್ಚಿಡಲು ಸಿಎಂ ಬದಲಾವಣೆ ಮುನ್ನಲೆಗೆ- ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಸರ್ಕಾರ ನಡೆಯುತ್ತಿಲ್ಲ ಎಂದು ಹೇಳಿದ ಸಚಿವ ಮಾಧುಸ್ವಾಮಿ ಆಡಿಯೋ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.

ಮಾಧುಸ್ವಾಮಿ ಹಿರಿಯ ನಾಯಕ ಕಾನೂನು ಸಚಿವ, ನಮ್ಮ ಸರ್ಕಾರದಲ್ಲಿ ಆಡಳಿತ ನಡೆಯುತ್ತಿಲ್ಲ ಅಂತ ಹೇಳಿದರು. ಈ ಸತ್ಯ ಮುಚ್ಚಿ ಹಾಕಲು ಕೆಲವು ಸಚಿವರನ್ನು ಸಿಎಂ ಎತ್ತಿಕಟ್ಟಿದ್ದಾರೆ. ಸೋಮಶೇಖರ್, ಮುನಿರತ್ನ ಇವರೇ ಮಾಧುಸ್ವಾಮಿ ರಾಜೀನಾಮೆ ಕೊಡಬೇಕು ಅಂತಿದ್ದಾರೆ ಬೊಮ್ಮಾಯಿ ಸರ್ಕಾರ ಇದೆ ಅಂತ ಹೇಳಬೇಕಾ ಎಂದಿದ್ದಾರೆ.

ರಾಜ್ಯ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಜೀವಂತವಾಗಿ ಇದೆಯಾ. ರಾಜ್ಯದ ಜನ‌ ಚುನಾವಣೆ ಯಾವಾಗ ಬರತ್ತೆ ಅಂತ ಕಾಯ್ತಿದ್ದಾರೆ. ಅವರ ಪಾರ್ಟಿಯವರೇ ಬೊಮ್ಮಾಯಿ‌ ಮೇಲೆ ಗಲಾಟೆ ಮಾಡಿದ್ದಾರೆ ಎಂದರು.

ಇನ್ನು ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರ ಆಡಿಯೋ ಮೊದಲು‌ ಪವರ್​ ಟಿವಿ ಬ್ರೇಕ್ ಮಾಡಿತ್ತು. ಪವರ್ ಟಿವಿ ಜೊತೆ ಮಾತನಾಡಲು ಸಚಿವ ಎಸ್ ಟಿ ಸೋಮಶೇಖರ್ ಹಿಂದೇಟು ಹಾಕಿದ್ದಾರೆ. ಈ ಆಡಿಯೋದಲ್ಲಿ ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಅವರು ಮಾಧುಸ್ವಾಮಿ ಜತೆ ಮಾತನಾಡಿ, ಗ್ರಾಮೀಣ ಸೊಸೈಟಿ ಮಟ್ಟದಲ್ಲಿ ಸಾಲ ನೀಡುವಾಗ ಕಮೀಷನ್ ಪಡೆಯುತ್ತಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎನ್ನುತ್ತಾರೆ. ಆಗ ಮಾಧುಸ್ವಾಮಿ ಸರ್ಕಾರ ನಡೆಯುತ್ತಿಲ್ಲ. ಇನ್ನೆಂಟು ತಿಂಗಳು ಇದೆ ಹೀಗಾಗಿ ಸುಮ್ಮನಿದ್ದೇವೆ. ನಾನು ಸಹ ಕಮೀಷನ್ ನೀಡಿದ್ದೇನೆ ಎಂದಿದ್ದರು.

Exit mobile version