Site icon PowerTV

6 ಸಾವಿರ ಬಿಸಿಯೂಟ ನೌಕರರನ್ನ ವಜಾ ಮಾಡಿದ ಸರ್ಕಾರ

ಬೆಂಗಳೂರು : 60 ವರ್ಷ ತುಂಬಿದ 6 ಸಾವಿರ ಬಿಸಿಯೂಟ ನೌಕರರನ್ನ ಯಾವುದೇ ಪರಿಹಾರ ಕೊಡದೇ ಸರ್ಕಾರ ಇವರನ್ನ ಕೆಲಸದಿಂದ ವಜಾ ಮಾಡಿದೆ ಹೀಗಾಗಿ ಬಿಸಿಯೂಟ ನೌಕರರು ಬೃಹತ್ ಪ್ರತಿಭಟನೆ ಆರಂಭ ಮಾಡಿದ್ದಾರೆ.

ನಗರದಲ್ಲಿ, ಪ್ರೊಟೆಸ್ಟ್ನಲ್ಲಿ‌ ನೂರಾರು ಸಂಖ್ಯೆಯಲ್ಲಿ ಬಿಸಿಯೂಟ ನೌಕರರು ಭಾಗಿಯಾಗಿದ್ದು, ಸರ್ಕಾರ ವಿರುದ್ಧ ಕಾರ್ಯಕರ್ತೆಯರು ದಿಕ್ಕಾರ ಕೂಗಿದ್ದಾರೆ. 2001 ರಲ್ಲಿ ಪ್ರಾರಂಭವಾದ ಬಿಸಿಯೂಟ ಯೋಜನೆಯಲ್ಲಿ ಒಟ್ಟು, 1 ಲಕ್ಷದ 19 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ 50 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಲಾಗುತ್ತೆ.

ಇನ್ನು, 2500 ಸಾವಿರ ರೂಪಾಯಿಗೆ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರನ್ನು ಯಾವುದೇ ಪರಿಹಾರ ಕೊಡದೇ ಸರ್ಕಾರ ಇವರನ್ನ ಕೆಲಸದಿಂದ ವಜಾಗೊಳಿಸಲಾಗಿದೆ. ಏಕಾಏಕಿ ಕೆಲಸದಿಂದ ತೆಗೆದಿರುವ ನೌಕರರಿಗೆ ಪರಿಹಾರ ಕೊಡಬೇಕು. ಶಿಕ್ಷಣ ಸಚಿವ ಬಿಸಿ ನಾಗೇಶ್ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪರಿಹಾರ ನೀಡದೇ ಕೆಲಸದಿಂದ ಸರ್ಕಾರ ವಜಾ ಮಾಡಿದೆ. 19 ವರ್ಷಗಳಿಂದ ದುಡಿಸಿಕೊಂಡು ಇದೀಗ ಯಾವುದೇ ಪರಿಹಾರ ಇಲ್ಲದೆ ಕೆಲಸದಿಂದ ಕೈ ಬಿಟ್ಟಿದ್ದಾರೆ.

Exit mobile version