Site icon PowerTV

ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ಮಾಡಿರೋದು ಖುಷಿ ಆಗಿದೆ: ಜಮೀರ್ ಅಹ್ಮದ್​

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಧ್ವಜಾರೋಹಣ ನಡೆದಿದೆ. ಈ ಕುರಿತು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಸಿದ್ದಾರೆ.

ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಿರೋದು ನನಗೆ ಖುಷಿ ತಂದಿದೆ. ನಾನು ಅಂದುಕೊಂಡಂತೆ ಆಗಿದೆ. ನಾನು ಎರಡು ತಿಂಗಳ ಹಿಂದೆಯೇ ಸ್ವಾತಂತ್ರ್ಯ ಆಚರಣೆ ಬಗ್ಗೆ ಹೇಳಿದ್ದೆ ಎಂದರು.

ಇನ್ಮುಂದೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಗಣರಾಜ್ಯೋತ್ಸವ ಕನ್ನಡ ರಾಜ್ಯೋತ್ಸವ ಈ‌ ಮೂರು ಆಚರಣೆ ಮಾಡ್ತೇವೆ. ಮುಂದಿನ ಧಾರ್ಮಿಕ ಹಬ್ಬದ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ಮಾಡಲಿದೆ. ನಾನು ನಿರ್ಧಾರ ಮಾಡಕ್ಕಾಗಲ್ಲ ಇದು ಈಗ ಮೈದಾನ ಸರ್ಕಾರದ ಆಸ್ತಿ. ಸಂಭ್ರಮದ ದಿನ ಹೆಚ್ಚು ಮಾತಾಡೋದು ಬೇಡ ಎಂದು ಜಮೀರ್ ಹೇಳಿದ್ದಾರೆ.

Exit mobile version