Site icon PowerTV

ಅವರ ನಾಲಿಗೆ ಅವರ ಸಂಸ್ಕೃತಿ ಹೇಳುತ್ತದೆ : ಶಾಸಕ ನಾಗೇಂದ್ರ

ಬಳ್ಳಾರಿ : ನಾನು ನನ್ನ ಸಹೋದರ ಇಬ್ಬರು ಸಹೋದರಿಯರು ಕೂಡ ಉತ್ತಮ ಶಿಕ್ಷಣ ಪಡೆದಿದ್ದೇವೆ ಎಂದು ಶಾಸಕ ನಾಗೇಂದ್ರ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ಸಹೋದರ ಇಬ್ಬರು ಸಹೋದರಿಯರು ಕೂಡ ಉತ್ತಮ ಶಿಕ್ಷಣ ಪಡೆದಿದ್ದೇವೆ. ನನ್ನ ತಂದೆ ಗೆಜೆಟೆಡ್ ಅಫೀಸರ್ ಆಗಿದ್ದರು. ಅವರ ನಾಲಿಗೆ ಅವರ ಸಂಸ್ಕೃತಿ ಹೇಳುತ್ತದೆ ಎಂದರು.

ಇನ್ನು, ಸಚಿವ ಶ್ರೀರಾಮುಲು ಹತಾಶರಾಗಿದ್ದಾರೆ ಕಾಂಗ್ರೆಸ್ ಅಲೆ ಅವರನ್ನ ಕಂಗೆಡಿಸಿದೆ. ಅವರು ನನಗೇನು ದಾರೆ ಎರೆದು ಗೆಲಿಸಿಲ್ಲ. ಸ್ವಂತ ಶಕ್ತಿಯಿಂದ ಬಿಜೆಪಿ.ಕಾಂಗ್ರೆಸ್ ಸೇರಿದಂತೆ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದೇನೆ. ಹಾಗಿದ್ದರೆ ಸ್ವಂತ ಅಣ್ಣ. ಅಳಿಯ. ತಂಗಿಯನ್ನೇಕೆ ಗೆಲ್ಲಿಸಿಕೊಂಡಿಲ್ಲ. ಇದೆ ಬೀದಿ ಬದಿ ರಾಜಕಾರಣಿ ೨೦೦೪ರಲ್ಲಿ ಅವರನ್ನ ಗೆಲ್ಲಿಸಿದ್ದು ಅಂತಾ ಮರೆತಿದ್ದಾರೆ. ಅವರ ಸಹೋದರಿ ಸಂಸತ್ ಚುನಾವಣೆಗೆ ನಿಂತಾಗ ನಮ್ಮ ಸಹಾಯಬೇಕಿತ್ತು. ನನ್ನ ಗುರುಗಳು ಹಿರಿಯರಾದಂತ ಎನ್ವೈ ಹನುಮಂತಪ್ಪ ಅವರು ನಿಂತಾಗ ಅವರಿಗೆ ಗೆಲುವು ತಂದಿದ್ದು ಇದೇ ಬೀದಿ ಬದಿ ರಾಜಕಾರಣಿ. ದೇಶದ ಪ್ರಧಾನಿಗಳು ಕೂಡ ಬೀದಿ ಬದಿಯಲ್ಲಿ ಟೀ ಮಾರಿದ್ದರು ಅನ್ನೊದು ಅವರಿಗೆ ತಿಳಿದಿಲ್ಲ ಎಂದು ಹೇಳಿದರು.

Exit mobile version