Site icon PowerTV

ಸಾವರ್ಕರ್​ ಅವಮಾನ ಬಿಜೆಪಿ ಸಹಿಸಲ್ಲ, ಟಿಪ್ಪು ಒಬ್ಬ ಮತಾಂಧ: ಎಂಎಲ್​ಸಿ ರವಿಕುಮಾರ್

ಶಿವಮೊಗ್ಗ : ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಅವರ ಬ್ಯಾನರ್ ಫೋಟೋಗೆ ಅವಮಾನ ಮಾಡಲಾಗಿದೆ. ಈ‌ ಅವಮಾನವನ್ನು ರಾಜ್ಯ ಬಿಜೆಪಿ ಸರ್ಕಾರ ಸಹಿಸಲ್ಲ ಎಂದು ಎಂಎಲ್​ಸಿ ರವಿಕುಮಾರ್ ಹೇಳಿದ್ದಾರೆ.

ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇದನ್ನು ಇಲ್ಲಿಗೇ ಬಿಡಲ್ಲ ನಾವು. ಶಿವಮೊಗ್ಗದಲ್ಲಿ ಇತ್ತೀಚೆಗೆ ಮಾಲ್ ನಲ್ಲೂ ಸಾವರ್ಕರ್ ಫೋಟೋ ತೆಗೆದು ಅವಮಾನ ಮಾಡಲಾಗಿತ್ತು. ಈಗ ಇದು ಎರಡನೇ ಘಟನೆ ಆಗಿದೆ. ಸರ್ಕಾರ ಅವರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿ ಮಾಡಬೇಕು ಎಂದರು.

ಶಿವಮೊಗ್ಗದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ನಾವು ಮುಟ್ಟಿಲ್ಲ, ಹರಿದಿಲ್ಲ. ಯಾರು ಟಿಪ್ಪು ಭಾವಚಿತ್ರ ಹರಿದಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಿ. ಆದ್ರೆ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ಆತ ಮತಾಂಧ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಂತ ಕಾಂಗ್ರೆಸ್ ದಾಖಲೆ ಕೊಡಲಿ. ನಿಜವಾದ ಇತಿಹಾಸ ತಿಳಿದುಕೊಳ್ಳಲಿ ಕಾಂಗ್ರೆಸ್ ನವ್ರು ಎಂದು ರವಿಕುಮಾರ್ ಹೇಳಿದ್ದಾರೆ.

Exit mobile version