Site icon PowerTV

ಎರಡು ಕೋಮಿನ ನಡುವೆ ಜಟಾಪಟಿ: ಶಿವಮೊಗ್ಗ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ.!

ಶಿವಮೊಗ್ಗ: ವೀರ ಸಾವರ್ಕರ್ ಭಾವಚಿತ್ರ ಇಡುವ ವಿಚಾರದಲ್ಲಿ ಜಿಲ್ಲೆಯ ಅಮೀರ್ ಅಹಮದ್ ವೃತ್ತದಲ್ಲಿ ಎರಡು ಕೋಮಿನ ಗುಂಪಿನ ನಡುವೆ ಜಟಾಪಟಿ ನಡೆದಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ 144 ಸೆಕ್ಷನ್ ನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಒಂದು ಗುಂಪು ಸಾವರ್ಕರ್ ಫೋಟೊ ತೆಗೆದು ಟಿಪ್ಪು ಫೋಟೋ ಇಡಲು ಹೊರಟಿತ್ತು. ಬಳಿಕ ಸಾವರ್ಕರ್ ಫೋಟೋ ತೆರವು ಮಾಡಿದ್ದ ಪೊಲೀಸರು. ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೊ ಇಡಲು ಪೊಲೀಸರು ನಿರಾಕರಿಸಿದ್ದರು. ಎರಡು ಕೋಮಿನ ನಡುವೆ ಜಟಾಪಟಿ ನಡೆದು ಗಲಾಟೆ ನಡೆದಿದೆ. ಈ ವೇಳೆ ಎರಡು ಗುಂಪನ್ನ ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಎರಡು ಕೋಮಿನವರಿಗೆ ಶಾಂತವಾಗಿರಲು ಪೊಲೀಸರು ಸೂಚನೆ ನೀಡಲಾಗಿದ್ದು, ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ. ಈ ವೇಳೆ ಸ್ಥಳಕ್ಕೆ ನುಗ್ಗಲು ಮತ್ತೊಂದು ಕೋಮಿನ ಗುಂಪು ಯತ್ನಿಸಿದೆ. ಆಗ ಪೊಲೀಸರು ತಡೆಯೊಡ್ಡಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

Exit mobile version