Site icon PowerTV

ಅಪಘಾತದಲ್ಲಿ ಹುಡಾ ಮಾಜಿ ಅಧ್ಯಕ್ಷರ ಪುತ್ರ ಸಾವು

ಹುಬ್ಬಳ್ಳಿ: ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರ ಕಿರಿಯ ಪುತ್ರ, ವಿಜಯನಗರ ನಿವಾಸಿ ತಿಲಕ ಕಲಬುರ್ಗಿ(18) ತಾರಿಹಾಳ ಬೈಪಾಸ್ ಬಳಿ ಭಾನುವಾರ ತಡರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬೈಪಾಸ್’ನ ಮೈಕ್ರೋ ಫಿನಿಷ್ ಬಳಿ ನಿಂತಿದ್ದ ಡೀಸೆಲ್ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ತಿಲಕ ಕಲಬುರ್ಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಸವಾರ ಗಂಭೀರ ಗಾಯಗೊಂಡಿದ್ದಾನೆ’ ಎಂದು ಗ್ರಾಮೀಣ ಠಾಣೆ ಇನ್’ಸ್ಪೆಕ್ಟರ್ ರಮೇಶ ಗೋಕಾಕ್ ತಿಳಿಸಿದರು.‌ ಪ್ರಕರಣ ದಾಖಲಾಗಿದೆ.

ಸ್ನೇಹಿತನ ಜೊತೆ ತಿಲಕ, ಧಾರವಾಡದ ನುಗ್ಗಿಕೇರಿ ಹನುಮಪ್ಪನ ದೇವಸ್ಥಾನಕ್ಕೆ ತೆರಳಿದ್ದ. ಮರಳಿ ಬರುವಾಗ ಅವಘಡ ಸಂಭವಿಸಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.ಕಿಮ್ಸ್’ಗೆ ಶಾಸಕ ಜಗದೀಶ ಶೆಟ್ಟರ್ ಭೇಟಿ ನೀಡಿ, ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.

Exit mobile version