Site icon PowerTV

ಸ್ವಾತಂತ್ರೋತ್ಸವದ ಶುಭಾಶಯ ತಿಳಿಸಿದ ಹೆಚ್​.ಡಿ ದೇವೇಗೌಡ

ಬೆಂಗಳೂರು : ಸ್ವಾತಂತ್ರ್ಯದ ಅಮೃತಮಹೋತ್ಸವಕ್ಕೆ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು, ಮಾಜಿ ಪ್ರಧಾನಿ ದೇವೇಗೌಡರು ಕೂಡ ನಾಡಿನ ಸಮಸ್ತ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಈ ಪುಣ್ಯದಿನದಂದು ಈ ದೇಶಕ್ಕಾಗಿ ಹೋರಾಡಿದ ಎಲ್ಲಾ ವೀರರನ್ನು ವಿಧೇಯತೆಯಿಂದ ಸ್ಮರಿಸಿ ನಮನ ಸಲ್ಲಿಸುತ್ತಾ ನಮ್ಮ ಭಾರತೀಯತೆಯನ್ನು ಹೆಮ್ಮೆಯಿಂದ ಸಂಭ್ರಮಿಸೋಣ. ಹಾಗೆಯೇ ನಮ್ಮ ಭಾರತ ಮಾತೆಯ ಕೀರ್ತಿಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಲು ಪ್ರತಿಯೊಬ್ಬ ಭಾರತೀಯನು ಪ್ರಾಮಾಣಿಕವಾಗಿ ಪಣ ತೊಡೋಣ ಎಂದು ಜನತೆಗೆ ಶುಭಾಶಯಗಳನ್ನು ಕೋರಿದರು.

Exit mobile version