Site icon PowerTV

ಪ್ರಥಮ ಭಾಷಣದಲ್ಲಿ ‘ರಾಷ್ಟ್ರಕವಿ ಕುವೆಂಪು’ ಅವ್ರ ಕವನ ನೆನೆದ ನೂತನ ರಾಷ್ಟ್ರಪತಿ.!

ನವದೆಹಲಿ: ನಾಳೆ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಿ, ರಾಷ್ಟ್ರಕವಿ ಕುವೆಂಪುವರ ಕವನವನ್ನ ಸ್ಮರಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರ ನಾನಳಿವೆ ನಿನಳಿವೆ ನಮ್ಮೆಲುವುಗಳ ಮೇಲೆ ಮೂಡುವುದು ಮೂಡುವುದು ನವ ಭಾರತ ಲೀಲೆ ಕವನವನ್ನು ಕನ್ನಡದಲ್ಲೇ ಉಲ್ಲೇಖಿಸಿದ್ದಾರೆ. ಬಳಿಕ ಇದರ ಅರ್ಥವನ್ನು ಬಿಡಿಸಿ ಹೇಳಿದ್ದಾರೆ.

ಕವಿ ರಾಷ್ಟ್ರಕವಿ ಕುವೆಂಪು ಅವರು ಸ್ವಾತಂತ್ರ್ಯ ಹೋರಾಟದ ಕುರಿತು ರಚಿಸಿದ ಕವನ ಇದಾಗಿದ್ದು, ರಾಷ್ಟ್ರಪತಿ ಕನ್ನಡದಲ್ಲಿ ಹೇಳಿರುವುದಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version