Site icon PowerTV

ಹರ್ ಘರ್ ತಿರಂಗಾ ಅಭಿಯಾನ: ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಅಮಿತ್ ಶಾ, ಬಿಎಸ್​ವೈ

ನವದೆಹಲಿ : ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ದೆಹಲಿಯ ತಮ್ಮ ನಿವಾಸದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತ್ರಿವರ್ಣ ಧ್ವಜ ಹಾರಿಸಿದರು.

ಬಳಿಕ ಧ್ವಜಾರೋಹಣದ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು, ತಿರಂಗ ನಮ್ಮ ಹೆಮ್ಮೆ. ಇದು ಪ್ರತಿಯೊರ್ವ ಭಾರತೀಯರನ್ನೂ ಒಂದುಗೂಡಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ತಮ್ಮ ಮನೆಯಲ್ಲಿ ತ್ರವರ್ಣ ಧ್ವಜ ಹಾರಿಸಿದರು. ಈ ವೇಳೆ ಬಿಎಸ್​ವೈ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಸೋಣ ಎಂದು ಕರೆ ನೀಡಿ, ದೇಶದ 75ನೇ ಸ್ವಾತಂತ್ರ್ಯ ದಿನವನ್ನು ಹೆಮ್ಮೆ, ಸಂಭ್ರಮಗಳಿಂದ ಆಚರಿಸೋಣ ಎಂದರು.

Exit mobile version