Site icon PowerTV

ಮಾರುಕಟ್ಟೆಗೆ ಬಂದಿದೆ ಸ್ವಾತಂತ್ರ್ಯ ಗಣಪನ ಮೂರ್ತಿ

ಬೆಂಗಳೂರು : ಮಾರುಕಟ್ಟೆಗೆ ಸ್ವಾತಂತ್ರ್ಯ ಗಣಪ ಬಂದಿದೆ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದ ಗಣಪತಿ ಮೂರ್ತಿಯನ್ನು ನಿರ್ಮಿಸಲಾಗಿದೆ. ಕೇಸರಿ, ಬಿಳಿ, ಹಸಿರಿಸಿಂದ ಕಂಗೊಳಿಸುತ್ತಿರುವ ಗಣೇಶ ಮೂರ್ತಿಗಳು ಜನರ ಮನಸೆಳೆಯುತ್ತಿದೆ.

ಬೆಂಗಳೂರಿನ ಆರ್.ವಿ. ರಸ್ತೆಯಲ್ಲಿ ಗಣೇಶ ಮೂರ್ತಿಗಳ ಮಾರಾಟ ಮಾಡುತ್ತಿದ್ದು, ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನಲೆ ವಿಶೇಷವಾಗಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಸ್ವಾಮೀಜಿಯಂತೆ ಉಡುಗೆ ತೊಟ್ಟ ಗಣಪತಿ ಮೂರ್ತಿಯ ತಯಾರಿಸಲಾಗಿದೆ.

ಅದಲ್ಲದೆ, ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರಂತೆ ಕಾವಿಧಾರಿಯಾಗಿರುವ ಗಣಪ ಸಹ ಮಾರುಕಟ್ಟೆಗೆ ಬಂದಿದೆ.

Exit mobile version